ETV Bharat / international

ಕೊರೊನಾ ಹಾವಳಿ: ಡೈವೋರ್ಸ್​ ಪಡೆದುಕೊಳ್ಳುವವರ ಸಂಖ್ಯೆಯಲ್ಲೂ ಭಾರಿ ಏರಿಕೆ! - ಮಹಾಮಾರಿ ಕೋವಿಡ್​​-19

ಮಹಾಮಾರಿ ಕೊರೊನಾ ಈಗಾಗಲೇ ಚೀನಾದಿಂದ ಕಾಲ್ಕಿತ್ತಿದ್ದು, ಇದರ ಬೆನ್ನಲ್ಲೇ ಅಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗಿದೆ.

Divorce cases soar in China, courtesy quarantine!

author img

By

Published : Mar 21, 2020, 2:51 AM IST

ಬೀಜಿಂಗ್​: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿರುವ ಮಹಾಮಾರಿ ಕೊರೊನಾ ಹುಟ್ಟಿಕೊಂಡಿದ್ದು ಚೀನಾದಲ್ಲಿ. ಆದರೆ ಈಗಾಗಲೇ ಅಲ್ಲಿ ಪ್ರಕರಣ ಕಡಿಮೆಯಾಗಿದ್ದರೂ ಮತ್ತೊಂದು ಸಮಸ್ಯೆ ಉದ್ಭವವಾಗಿದೆ.

ಕೊರೊನಾ ಸೋಂಕು ಹಾವಳಿ ನಡುವೆ ಚೀನಾದಲ್ಲಿ ಡೈವೋರ್ಸ್​​ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಡ್ರ್ಯಾಗನ್​ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಕಂಡು ಬಂದಿರುವ ಕಾರಣ ಅವರು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ ಗಂಡ-ಹೆಂಡತಿ ನಡುವೆ ಅನೇಕ ರೀತಿಯ ಮುನಿಸು, ಮನಸ್ತಾಪ ಉಂಟಾಗಿ ಡೈವೋರ್ಸ್​ ಕೇಸ್​ಗಳು ಜಾಸ್ತಿಯಾಗಿವೆ ಎಂದು ತಿಳಿದು ಬಂದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚೀನಾದ ಮದುವೆ ನೋಂದಣಿ ಕಚೇರಿ ಮಾಹಿತಿ ನೀಡಿದ್ದು, ಫೆ.24ರಂದು ಒಂದೇ ಸೆಂಟರ್​ನಲ್ಲಿ ಬರೋಬ್ಬರಿ 300 ಡಿವೋರ್ಸ್​ ಕೇಸ್​ಗಳು ಬಂದಿವೆ ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಕೊರೊನಾ ತಡೆಗಟ್ಟಲು ಹಲವು ನಗರಗಳ ಮೇಲೆ ನಿರ್ಬಂಧ ಹೇರಿ ಮನೆಯಿಂದ ಹೊರಗಡೆ ಬರದಂತೆ ದಿಗ್ಬ೦ಧನ ಹಾಕಲಾಗಿತ್ತು. ಈ ವೇಳೆ ಲಕ್ಷಾಂತರ ಜನರು ಅನೇಕ ದಿನಗಳ ಕಾಲ ಮನೆಯಲ್ಲಿ ಕಳೆದಿದ್ದು, ಅವರ ನಡುವೆ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.