ETV Bharat / international

ಅಮೆರಿಕ ಕಾಂಗ್ರೆಸ್​ ಉದ್ದೇಶಿಸಿ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಭಾಷಣ!

ಉಕ್ರೇನ್​ ಅಧ್ಯಕ್ಷರು ಅಮೆರಿಕ ಕಾಂಗ್ರೆಸ್​ ಉದ್ದೇಶಿಸಿ ಮಾತನಾಡಲಿರುವುದನ್ನು ಲೈವ್​ ಸ್ಟ್ರೀಮ್​ ಮೂಲಕ ಸಾರ್ವಜನಿಕ ಪ್ರಸಾರ ಕೂಡಾ ಮಾಡಲಾಗುತ್ತಿದೆ ಎಂದು ಡೆಮಾಕ್ರಟಿಕ್​ ನಾಯಕರು ತಿಳಿಸಿದ್ದಾರೆ. ಪ್ರಜಾಪ್ರಭುತ್ವ ದೇಶವೊಂದು ತಮ್ಮ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ದೇಶದ ನಾಯಕನ ಭಾಷಣ ಮಾಡಿಸುತ್ತಿರುವುದು ವಿಶೇಷವಾಗಿದೆ ಎಂದು ಅಮೆರಿಕ ಸಂಸತ್​​ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಅಮೆರಿಕ ಕಾಂಗ್ರೆಸ್​ ಉದ್ದೇಶಿಸಿ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಭಾಷಣ!
ZELENSKYY-US-2NDLD CONGRESS
author img

By

Published : Mar 15, 2022, 7:13 AM IST

ವಾಷಿಂಗ್ಟನ್(ಅಮೆರಿಕ)​: ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸುತ್ತಿರುವಂತೆಯೇ ​​​ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ವರ್ಚುಯಲ್​ ಭಾಷಣ ಮಾಡಲಿದ್ದಾರೆ. ಝೆಲೆನ್ಸ್ಕಿ ಹೌಸ್ ಆಫ್​ ರೆಪ್ರೆಸೆಂಟಿಟಿವ್​​​ ಮತ್ತು ಸೆನೆಟ್ ಸದಸ್ಯರೊಂದಿಗೆ ಬುಧವಾರ ಮಾತನಾಡಲಿದ್ದಾರೆ ಎಂದು ಡೆಮಾಕ್ರಟಿಕ್ ನಾಯಕರು ಹೇಳಿದ್ದಾರೆ.

ಇದೇ ವೇಳೆ ಉಕ್ರೇನ್​ ಅಧ್ಯಕ್ಷರು ಅಮೆರಿಕ ಕಾಂಗ್ರೆಸ್​ ಉದ್ದೇಶಿಸಿ ಮಾತನಾಡಲಿರುವುದನ್ನು ಲೈವ್​ ಸ್ಟ್ರೀಮ್​ ಮೂಲಕ ಸಾರ್ವಜನಿಕ ಪ್ರಸಾರ ಕೂಡಾ ಮಾಡಲಾಗುತ್ತಿದೆ ಎಂದು ಡೆಮಾಕ್ರಟಿಕ್​ ನಾಯಕರು ಘೋಷಿಸಿದ್ದಾರೆ. ಪ್ರಜಾಪ್ರಭುತ್ವ ದೇಶವೊಂದು ತಮ್ಮ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ದೇಶದ ನಾಯಕನ ಭಾಷಣ ಮಾಡಿಸುತ್ತಿರುವುದು ವಿಶೇಷವಾಗಿದೆ ಎಂದು ಅಮೆರಿಕ ಸಂಸತ್​​ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬಣ್ಣಿಸಿದ್ದಾರೆ.

ಉಕ್ರೇನ್​​ ಅಧ್ಯಕ್ಷರು ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವ ವಿಷಯ ತಿಳಿದು ಸಂಸದರು ರೋಮಾಂಚನಗೊಂಡಿದ್ದಾರೆ ಎಂದು ಪೆಲೊಸಿ ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್​ ವಶಕ್ಕೆ ಪಡೆಯಲು ಹರಸಾಹಸ ಮಾಡುತ್ತಿದ್ದು, ಉಕ್ರೇನ್​ ರಾಜಧಾನಿ ಕೀವ್​ ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ಕೀವ್​ ನಗರದ ಮೇಲೆ ವಾಯುದಾಳಿ ನಡೆಸುತ್ತಿದ್ದಾರೆ.

ಇನ್ನೊಂದೆಡೆ 20 ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್​ ತೊರೆಯುತ್ತಿದ್ದಾರೆ. ರಷ್ಯಾ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿರುವುದರಿಂದ ಜನರು ಭಯಭೀತಿಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಸಂಸತ್​ನ ಸ್ವೀಕರ್​​​ ಪೆಲೋಸಿ, ನಮ್ಮ ದೇಶ ಮತ್ತು ಜಗತ್ತು ಉಕ್ರೇನ್ ಜನರ ಹೋರಾಟದ ಬಗ್ಗೆ ವಿಸ್ಮಯಗೊಂಡಿದೆ ಎಂದಿದ್ದಾರೆ. ಮತ್ತೊಂದೆಡೆ ಉಕ್ರೇನ್‌ಗೆ ನೆರವಿಗೆ ಧಾವಿಸಿರುವ ಅಮೆರಿಕ ತುರ್ತು ಮಿಲಿಟರಿ ಮತ್ತು ಮಾನವೀಯ ಸಹಾಯಕ್ಕಾಗಿ 13.6 ಶತಕೋಟಿ ಡಾಲರ್​ ನೆರವು ಘೋಷಿಸಿದೆ.

ಇದನ್ನು ಓದಿ:ರಷ್ಯಾ ಮತ್ತು ಉಕ್ರೇನ್​ ನಡುವೆ ಮತ್ತೊಂದು ಸುತ್ತಿನ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.