ಮಾಸ್ಕೋ(ರಷ್ಯಾ): ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆಯ ನಂತರ ಪರಸ್ಪರ ಬಾಂಬ್ ದಾಳಿ ಆರಂಭವಾಗಿವೆ. ರಷ್ಯಾ ಕೆಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಿದ್ದು, ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
'ಉಕ್ರೇನ್ ವಾಯುನೆಲೆ ಮೇಲೆ ರಷ್ಯಾ ದಾಳಿ': ಉಕ್ರೇನ್ ಪಡೆಗಳ ಕಮಾಂಡ್ ಪ್ರಕಾರ, ಫೆಬ್ರವರಿ 24ರಂದು ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಸೇನಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹೇಳಿಕೆಯನ್ನು ಸಾರಾಸಾಗಟಾಗಿ ನಿರಾಕರಿಸಿರುವ ರಷ್ಯಾ, ಉಕ್ರೇನಿಯನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಉಕ್ರೇನ್‌ನ ಇವಾನೊ-ಫ್ರಾಂಕಿವ್ಸ್ಕ್ ವಿಮಾನ ನಿಲ್ದಾಣ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವ ವಿಡಿಯೋವನ್ನು ಅಮೆರಿಕ ಮೂಲದ ಬಿಎನ್ಒ ನ್ಯೂಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
-
WATCH: Missile hits airport in Ivano-Frankivsk, Ukraine pic.twitter.com/EnskxXhpnq
— BNO News (@BNONews) February 24, 2022 " class="align-text-top noRightClick twitterSection" data="
">WATCH: Missile hits airport in Ivano-Frankivsk, Ukraine pic.twitter.com/EnskxXhpnq
— BNO News (@BNONews) February 24, 2022WATCH: Missile hits airport in Ivano-Frankivsk, Ukraine pic.twitter.com/EnskxXhpnq
— BNO News (@BNONews) February 24, 2022
ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ನಲ್ಲಿ ಮಾರ್ಷಲ್ ಕಾನೂನು ಜಾರಿಗೆ ತಂದಿದ್ದು, ನಾಗರಿಕರು ಶಾಂತವಾಗಿರಬೇಕೆಂದು ಮನವಿ ಮಾಡಿದ್ದಾರೆ. ರಷ್ಯಾ ವಿಶೇಷ ಕಾರ್ಯಾಚರಣೆಯನ್ನು ಘೋಷಿಸಿದಂತೆಯೇ ಡಾನ್ಬಾಸ್ ಪ್ರದೇಶದಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಉಕ್ರೇನ್ ಘೋಷಿಸಿದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರಷ್ಯಾದ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ಉಕ್ರೇನಿಯನ್ ರಾಜ್ಯವನ್ನು ನಾಶಪಡಿಸುವುದಾಗಿದೆ. ಬಲವಂತವಾಗಿ ಉಕ್ರೇನ್ ಪ್ರದೇಶವನ್ನು ವಶಪಡಿಸಿಕೊಳ್ಳುವ ರಷ್ಯಾ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ರಷ್ಯಾ ಆಕ್ರಮಣ ಶುರು: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ