ETV Bharat / international

ಆಸ್ಟ್ರೇಲಿಯನ್​ ಓಪನ್​: ಬಾಲ್​ ಗರ್ಲ್​ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸಲು ಹೇಳಿ ವಿವಾದಕ್ಕೊಳಗಾದ ಆಟಗಾರ - Tennis player Elliot Benchetrit

21 ವರ್ಷದ ಯುವ ಟೆನ್ನಿಸ್ ಆಟಗಾರ ಎಲಿಯಟ್ ಬೆಂಚೆಟ್ರಿಟ್​, ಆಸ್ಟ್ರೇಲಿಯನ್​ ಓಪನ್​ನ ಅರ್ಹತಾ ಸುತ್ತಿನ ವೇಳೆ ಬಾಲ್​ ಗರ್ಲ್​ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸುವಂತೆ ಹೇಳಿ ವಿವಾದಕ್ಕೆ ಒಳಗಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Tennis player Elliot Benchetrit
ಆಸ್ಟ್ರೇಲಿಯನ್​ ಓಪನ್
author img

By

Published : Jan 21, 2020, 11:03 AM IST

ಮೆಲ್ಬರ್ನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್​ ಓಪನ್​ನ ಅರ್ಹತಾ ಸುತ್ತಿನ ವೇಳೆ ಬಾಲ್​ ಗರ್ಲ್​ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸುವಂತೆ ಹೇಳಿ ಫ್ರೆಂಚ್ ಟೆನಿಸ್ ಆಟಗಾರ ಎಲಿಯಟ್ ಬೆಂಚೆಟ್ರಿಟ್ ವಿವಾದಕ್ಕೆ ಒಳಗಾಗಿದ್ದಾರೆ.

  • So this is the moment where Elliot Benchetrit asks the ballkid to peel his banana. I’m glad the umpire (John Blom) stepped in and told him off. pic.twitter.com/TK1GET68pG

    — Alex Theodoridis (@AlexTheodorid1s) January 19, 2020 " class="align-text-top noRightClick twitterSection" data=" ">

21 ವರ್ಷದ ಯುವ ಟೆನಿಸ್ ಆಟಗಾರ ಎಲಿಯಟ್ ಬೆಂಚೆಟ್ರಿಟ್​ಗೆ ಆಟದ ವಿರಾಮದ ಸಮಯದಲ್ಲಿ ಬಾಳೆಹಣ್ಣನ್ನು ನೀಡಲಾಗಿದೆ. ಆದರೆ ಬೆಂಚೆಟ್ರಿಟ್ ಬೆರಳಿಗೆ ಗಾಯವಾಗಿದ್ದು, ಪ್ಲಾಸ್ಟರ್​ ಹಾಕಿಕೊಂಡಿದ್ದರಿಂದ ಆತ ಬಾಲ್​ ಗರ್ಲ್​ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸುವಂತೆ ಕೇಳಿದ್ದಾನೆ. ಇದನ್ನು ನೋಡಿದ ಅಂಪೈರ್, ತಾನೇ ಬಿಡಿಸಿಕೊಳ್ಳುವಂತೆ ಬೆಂಚೆಟ್ರಿಟ್​ಗೆ ಸೂಚಿಸಿದ್ದಾರೆ. ಬಳಿಕ ಬೆಂಚೆಟ್ರಿಟ್, ಬಾಯಿಯಿಂದ ಹಣ್ಣಿನ ಸಿಪ್ಪೆ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಟೆನಿಸ್​ ಬರಹಗಾರ ಅಲೆಕ್ಸ್ ಥಿಯೋಡೋರಿಡಿಸ್, ಈ ಘಟನೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು, ಟೆನಿಸ್ ಆಟಗಾರನ ನಡೆಗೆ ನೆಟ್ಟಿಗರಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಇನ್ನು ಅರ್ಹತಾ ಸುತ್ತಿನಲ್ಲಿ ಕಜಕಿಸ್ತಾನದ ಡಿಮಿಟ್ರಿ ಪಾಪ್ಕೊರನ್ನು ಸೋಲಿಸಿ, ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.