ETV Bharat / international

18ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಅಳಿಲಿಗೆ ದಯಾಮರಣ ಶಿಕ್ಷೆ

author img

By

Published : Dec 31, 2021, 8:06 AM IST

ನಿರುಪದ್ರವಿ ಪ್ರಾಣಿಗಳಲ್ಲಿ ಅಳಿಲು ಕೂಡಾ ಒಂದು. ಆದ್ರೆ ಇದೇ ಅಳಿಲಿಗೆ ಬಿಟ್ರನ್​ನಲ್ಲಿ ದಯಾಮರಣ ಶಿಕ್ಷೆ ನೀಡಿ ಸಾಯಿಸಲಾಗಿದೆ. ಇದಕ್ಕೆ ಕಾರಣವೂ ಇದೆ.

Squirrel on rampage attacks 18 people, Squirrel on rampage attacks people in North Wales, Squirrel attack in North Wales, Squirrel bite people, ಅಳಿಲು 18 ಜನರ ಮೇಲೆ ದಾಳಿ, ಉತ್ತರ ವೇಲ್ಸ್‌ನಲ್ಲಿ ಜನರ ಮೇಲೆ ಅಳಿಲು ದಾಳಿ, ನಾರ್ಥ್​ ವೇಲ್ಸ್‌ನಲ್ಲಿ ಅಳಿಲು ದಾಳಿ, ಜನರನ್ನು ಕಚ್ಚಿದ ಅಳಿಲು,
18ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಅಳಿಲಿಗೆ ಮರಣದಂಡನೆ ಶಿಕ್ಷೆ!

ಫ್ಲಿಂಟ್‌ಶೈರ್‌: ಚುರುಕಾಗಿ ಓಡಾಡುವ ಸಣ್ಣ ದೇಹರಚನೆಯ ಪ್ರಾಣಿ ಅಳಿಲು. ಅದರ ಚೆಲ್ಲಾಟ ಮತ್ತು ನೋಟ ನೋಡಲು ಆಕರ್ಷಕ. ಇಂತಹ ಅಳಿಲಿಗೆ ಬ್ರಿಟನ್‌ನಲ್ಲಿ ಚುಚ್ಚುಮದ್ದು ನೀಡಿ ಕೊಲ್ಲಲಾಗಿದೆ.

ಬಕ್ಲಿ ಪಟ್ಟಣದಲ್ಲಿ ಪುಟ್ಟ ಅಳಿಲೊಂದು ಸುಮಾರು 18 ಜನರ ಮೇಲೆ ದಾಳಿ ಮಾಡಿದೆ. ಹೀಗಾಗಿ ಚುಚ್ಚುಮದ್ದು ನೀಡಿ ಮರಣಶಿಕ್ಷೆ ನೀಡಲಾಯಿತು. ಪಟ್ಟಣದ ಪಕ್ಷಿ ಪ್ರೇಮಿ ಕೊರಿನ್ನೆ ರೆನಾಲ್ಡ್ಸ್ ಎಂಬ ಮಹಿಳೆಯ​ ಬಳಿ ಈ ಅಳಿಲು ಪ್ರತಿದಿನ ಆಹಾರ ಅರಸಿ ಬರುತ್ತಿತ್ತಂತೆ. ಕ್ರಿಸ್​ಮಸ್‌ ಹಬ್ಬಕ್ಕೆ ಕೆಲವು ದಿನಗಳ ಮೊದಲು ಅವರಿಗೆ ಅನಿರೀಕ್ಷಿತ ಅನುಭವ ಆಗಿದೆ. ಆಹಾರ ನೀಡುತ್ತಿದ್ದಾಗ ಅವರ ಕೈಗೆ ಇದೇ ಅಳಿಲು ಏಕಾಏಕಿ ಕಚ್ಚಿ ಗಾಯಗೊಳಿಸಿ ಪರಾರಿಯಾಗಿದೆ.

ಈ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿಯೂ ಅಳಿಲಿನ ಬಗ್ಗೆ ಬರೆದಿರುವ ಪೋಸ್ಟ್​ಗಳನ್ನು ಕಂಡು ಆಕೆ ಗಾಬರಿಗೊಂಡಳು. ಅಲ್ಲಿ ಎಲ್ಲರೂ ಅಳಿಲಿನ ಉಪದ್ರವಗಳ ಬಗ್ಗೆ ಹೆಚ್ಚು ಚರ್ಚಿಸಿದ್ದರು. ಇದು ರೆನಾಲ್ಡ್ಸ್​ ಆತಂಕ ಹೆಚ್ಚಿಸಿತು. ಕೆಲವರಂತೂ ಅಳಿಲನ್ನು 'ಗ್ರೆಮ್ಲಿನ್ಸ್' ಚಿತ್ರದಲ್ಲಿನ ವಿಲನ್‌ ಸ್ರೈಪ್ ಎಂದು ಕರೆದಿದ್ದಾರೆ.

ಜನರ ಸಮಸ್ಯೆಗಳನ್ನರಿತ ಈಕೆ​ ಪ್ರತಿದಿನ ಆಹಾರ ಹುಡುಕಿ ಬರುತ್ತಿದ್ದ ಅಳಿಲನ್ನು ಬಲೆ ಹಾಕಿ ಹಿಡಿದು ‘ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್’ ತಂಡಕ್ಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಟ್ಟು ದೂರದ ಕಾಡಿನಲ್ಲಿ ಬಿಡುವಂತೆ ಮನವಿ ಮಾಡಲಾಯಿತು. ಆದ್ರೆ, ಸ್ಥಳೀಯ ನ್ಯಾಯಾಲಯ ಇದಕ್ಕೆ ಒಪ್ಪಿಗೆ ನೀಡದ ಕಾರಣ ಪಶು ವೈದ್ಯರು ಚುಚ್ಚುಮದ್ದು ನೀಡಿ ದಯಾಮರಣ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.