ETV Bharat / international

ಕೊರೊನಾದಿಂದ ಕಂಗೆಟ್ಟ ಯುರೋಪ್: ಇಟಲಿ, ಸ್ಪೇನ್​, ಫ್ರಾನ್ಸ್​ನಲ್ಲಿ ಅತಿ ಹೆಚ್ಚು ಸಾವು-ನೋವು! - ಯುರೋಪ್ ಕೋವಿಡ್ 19

ಕೊರೊನಾ ಸಾವಿನಲ್ಲಿ ಐದಂಕಿ ದಾಟಿದ ಎರಡನೇ ದೇಶ ಸ್ಪೇನ್​. ಇಲ್ಲಿ ಈವರೆಗೆ 11,947 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,26,168ಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. ಕಳೆದ 24 ಗಂಟೆಯೊಳಗೆ ಇಲ್ಲಿ 809 ಜನ ಸಾವನ್ನಪ್ಪಿದ್ದಾರೆ. ಆದರೆ ಮಾರ್ಚ್​ 26ರ ಬಳಿಕ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯ ಏರಿಕೆ ಪ್ರಮಾಣ ಕಡಿಮೆಯಾಗಿದೆಯಂತೆ. ಅಂದರೆ ಮಾರ್ಚ್​ 26ರಿಂದ 7.3 ಪ್ರತಿಶತ ಪ್ರಮಾಣದ ಏರಿಕೆ ಆಗಿದ್ದು, ಇದು ಕಡಿಮೆ ಏರಿಕೆಯನ್ನು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ.

COVID-19
ಕೊರೊನಾ
author img

By

Published : Apr 5, 2020, 10:23 AM IST

ಮ್ಯಾಡ್ರಿಡ್​(ಸ್ಪೇನ್​): ಶ್ರೀಮಂತ ರಾಷ್ಟ್ರಗಳ ಒಕ್ಕೂಟವಾದ ಯುರೋಪ್​, ಕೋವಿಡ್​-19 ಕಂಟಕಕ್ಕೆ ಸಿಲುಕಿ ಒದ್ದಾಡುತ್ತಿದೆ. ಪ್ರತಿನಿತ್ಯ ನೂರಾರು ಸಾವು-ನೋವು ಸಂಭವಿಸುತ್ತಿದ್ದರೂ, ವೈರಸ್​​​ ನಿಯಂತ್ರಣಕ್ಕೆ ಬಾರದೆ ಸರ್ಕಾರ ಕೈ ಚೆಲ್ಲಿ ಕೂತಿದೆ.

ಇಟಲಿಯಲ್ಲಿ ಕೊರೊನಾ ಸಾವಿನ ನಾಗಾಲೋಟ ಮುಂದುವರಿದಿದ್ದು, ಈವರೆಗೆ 15,362ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಇಟಲಿ ಅಗ್ರಸ್ಥಾನದಲ್ಲಿದೆ.

ಕೊರೊನಾ ಸಾವಿನಲ್ಲಿ ಐದಂಕಿ ದಾಟಿದ ಎರಡನೇ ದೇಶ ಸ್ಪೇನ್​. ಇಲ್ಲಿ ಈವರೆಗೆ 11,947 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,26,168ಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. ಆದರೆ ಸ್ಪೇನ್​ ಸರ್ಕಾರ ಹೇಳುವ ಪ್ರಕಾರ ಇಲ್ಲಿ ಇತ್ತೀಚೆಗೆ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ. ಕಳೆದ 24 ಗಂಟೆಯೊಳಗೆ ಇಲ್ಲಿ 809 ಜನ ಸಾವನ್ನಪ್ಪಿದ್ದಾರೆ. ಆದರೆ ಮಾರ್ಚ್​ 26ರ ಬಳಿಕ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯ ಏರಿಕೆ ಪ್ರಮಾಣ ಕಡಿಮೆಯಾಗಿದೆಯಂತೆ. ಅಂದರೆ ಮಾರ್ಚ್​ 26ರಿಂದ 7.3 ಪ್ರತಿಶತ ಪ್ರಮಾಣದ ಏರಿಕೆ ಆಗಿದ್ದು, ಇದು ಕಡಿಮೆ ಏರಿಕೆಯನ್ನು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ.

ಫ್ರಾನ್ಸ್​ನಲ್ಲಿ 7,560 ಜನ ಸಾವನ್ನಪ್ಪಿದ್ದು, ಸುಮಾರು 90,000 ಜನರಿಗೆ ಸೋಂಕು ಬಾಧಿಸಿದೆ. ಜಮರ್ನಿಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಈವರೆಗೆ 96,000ಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. 1,400ಕ್ಕೂ ಹೆಚ್ಚು ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬ್ರಿಟನ್​ನಲ್ಲಿ ಈವರೆಗೆ 4,313 ಜನ ಸೋಂಕಿನಿಂದ ಸಾವನ್ನಪ್ಪಿದ್ದು, 41,900ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್​ ಪತ್ತೆಯಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಯಂತ್ರಣ ಬಿಗಿಗೊಳಿಸಿದ ಟರ್ಕಿ

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ದೇಶದಲ್ಲಿ ಮಾಸ್ಕ್​ ಬಳಕೆಯನ್ನು ಕಡ್ಡಾಯಗೊಳಿಸಿದ ಒಂದು ದಿನದ ನಂತರ, ಇಸ್ತಾಂಬುಲ್​ನ ಮಾರುಕಟ್ಟೆಗಳು ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ಸರ್ಕಾರ ನಿಯಂತ್ರಣವನ್ನು ಹೆಚ್ಚಿಸಿದೆ.

ಶನಿವಾರ ಪ್ರಕಟವಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಸಾವಿನ ಸಂಖ್ಯೆ ಈಗ 500 ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ ಸುಮಾರು 24,000 ಕ್ಕೆ ತಲುಪಿದೆ. ಅವುಗಳಲ್ಲಿ ಹೆಚ್ಚಿನ ಪ್ರಕರಣ ಟರ್ಕಿಯ ಆರ್ಥಿಕ ರಾಜಧಾನಿ ಇಸ್ತಾಂಬುಲ್‌ನಲ್ಲಿ ವರದಿಯಾಗಿವೆ.

ಶನಿವಾರದಿಂದ ಅಂಗಡಿ ಅಥವಾ ಮಾರುಕಟ್ಟೆಗಳಿಗೆ ಹೋಗುವವರೆಲ್ಲರೂ ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಅಧ್ಯಕ್ಷ ಎರ್ಡೊಗನ್ ಸೂಚಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.