ಮಾಸ್ಕೋ,ರಷ್ಯಾ : ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ರಷ್ಯಾ ನಡೆಗೆ ಖಂಡನೆ ವ್ಯಕ್ತಪಡಿಸಿವೆ.
ಬೇರೆ ಬೇರೆ ರಾಷ್ಟ್ರಗಳು ಮಾತ್ರವಲ್ಲದೇ ರಷ್ಯಾದೊಳಗೇ, ರಷ್ಯಾದ ಜನರೇ ಪುಟಿನ್ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬೀದಿಗೆ ಇಳಿದಿದ್ದಾರೆ.
ಗುರುವಾರ ಸಂಜೆ ಮಾಸ್ಕೋ ನಗರದ ಮಧ್ಯಭಾಗದಲ್ಲಿ 1,000ಕ್ಕೂ ಹೆಚ್ಚು ಜನರು 'ಯುದ್ಧ ಬೇಡ' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್ ಹೊರವಲಯದಲ್ಲಿರುವ ಗೋಸ್ಟಿನಿ ಡ್ವೋರ್ ಶಾಪಿಂಗ್ ಆರ್ಕೇಡ್ ಬಳಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದ ಕಾರಣದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
-
Anti-war protests spontaneously break out across Russia shouting, "Hands off Ukraine!" pic.twitter.com/K75YgkTfFc
— mohamad safa (@mhdksafa) February 24, 2022 " class="align-text-top noRightClick twitterSection" data="
">Anti-war protests spontaneously break out across Russia shouting, "Hands off Ukraine!" pic.twitter.com/K75YgkTfFc
— mohamad safa (@mhdksafa) February 24, 2022Anti-war protests spontaneously break out across Russia shouting, "Hands off Ukraine!" pic.twitter.com/K75YgkTfFc
— mohamad safa (@mhdksafa) February 24, 2022
ಪುಟಿನ್ ಸರ್ಕಾರದ ವಿರುದ್ಧ ಪ್ರತಿಭಟನೆ ಕೇವಲ ಒಂದೆರೆಡು ನಗರಗಳಿಗೆ ಮಾತ್ರ ಸೀಮಿತವಾಗದೇ, ರಷ್ಯಾದ ಸುಮಾರು 54 ನಗರಗಳಲ್ಲಿ ನಡೆಯಿತು. ಈ ಹಿನ್ನೆಲೆಯಲ್ಲಿ ಸುಮಾರು 1,745 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಾಸ್ಕೋ ನಗರದಲ್ಲಿ ಒಂದರಲ್ಲೇ ಕನಿಷ್ಠ 957 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
-
#Putin is not #Russia! #FreeRussia, we need to stop this crazy man. We can't sit still watching the end of #Ukraine and the destruction of #Kiev.
— ScreAnzàTo 🇪🇺🏳️🌈🇮🇹🏳️⚧ (@anza_alessandro) February 24, 2022 " class="align-text-top noRightClick twitterSection" data="
WE ARE PROUD OF RUSSIAN PEOPLE WHO ARE PROTESTING AGAINST WAR!
We Stand with You 🇺🇦 #Ukrainian 🇪🇺 #RussiaUkraineConflict pic.twitter.com/VABgbro43M
">#Putin is not #Russia! #FreeRussia, we need to stop this crazy man. We can't sit still watching the end of #Ukraine and the destruction of #Kiev.
— ScreAnzàTo 🇪🇺🏳️🌈🇮🇹🏳️⚧ (@anza_alessandro) February 24, 2022
WE ARE PROUD OF RUSSIAN PEOPLE WHO ARE PROTESTING AGAINST WAR!
We Stand with You 🇺🇦 #Ukrainian 🇪🇺 #RussiaUkraineConflict pic.twitter.com/VABgbro43M#Putin is not #Russia! #FreeRussia, we need to stop this crazy man. We can't sit still watching the end of #Ukraine and the destruction of #Kiev.
— ScreAnzàTo 🇪🇺🏳️🌈🇮🇹🏳️⚧ (@anza_alessandro) February 24, 2022
WE ARE PROUD OF RUSSIAN PEOPLE WHO ARE PROTESTING AGAINST WAR!
We Stand with You 🇺🇦 #Ukrainian 🇪🇺 #RussiaUkraineConflict pic.twitter.com/VABgbro43M
‘ಉಕ್ರೇನ್ ಮೇಲೆ ಆಕ್ರಮಣ ಮಾಡಲು ವ್ಲಾಡಿಮಿರ್ ಪುಟಿನ್ ಹಲವಾರು ಕಾರಣಗಳನ್ನು ನೀಡುತ್ತಾರೆ. ಪೂರ್ವ ಉಕ್ರೇನ್ನಲ್ಲಿರುವ ಜನರಿಗೆ ಉಕ್ರೇನ್ ಸರ್ಕಾರ ಕಿರುಕುಳ ನೀಡುತ್ತಿದ್ದು, ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಪುಟಿನ್ ಆರೋಪಿಸಿ, ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಆದರೆ, ಪುಟಿನ್ ಆರೋಪಗಳು ಸುಳ್ಳು ಎಂದು ರಷ್ಯಾ ಪ್ರತಿಭಟನಾಕಾರರು ಹೇಳಿದ್ದಾರೆ.
- — Ukraine / Україна (@Ukraine) February 24, 2022 " class="align-text-top noRightClick twitterSection" data="
— Ukraine / Україна (@Ukraine) February 24, 2022
">— Ukraine / Україна (@Ukraine) February 24, 2022
ಮತ್ತೊಂದೆಡೆ ಉಕ್ರೇನ್ನ ಅಧಿಕೃತ ಟ್ವಿಟರ್ ಖಾತೆ ಕಾರ್ಟೂನ್ ಅನ್ನು ಪೋಸ್ಟ್ ಮಾಡಿದ್ದು, ಈ ಕಾರ್ಟೂನ್ನಲ್ಲಿ ಹಿಟ್ಲರ್ ಮತ್ತು ಪುಟಿನ್ ಅವರನ್ನು ಚಿತ್ರಿಸಲಾಗಿದೆ. ಪುಟಿನ್ ಅವರ ಕೆನ್ನೆಯನ್ನು ಹಿಟ್ಲರ್ ಸವರುತ್ತಿದ್ದಾರೆ. ಈ ಚಿತ್ರದ ಮೂಲಕ ಹಿಟ್ಲರ್ ಮತ್ತು ಪುಟಿನ್ ಇಬ್ಬರ ಮನಸ್ಥಿತಿಗಳು ಒಂದೇ ಎಂಬ ಭಾವನೆಯನ್ನು ಉಕ್ರೇನ್ ವ್ಯಕ್ತಪಡಿಸಿದೆ.
ಅಷ್ಟೇ ಅಲ್ಲ, ರಷ್ಯಾದಲ್ಲಿ ಉಕ್ರೇನ್ ಪರ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರು, ಪುಟಿನ್ ಅನ್ನು ಹಿಟ್ಲರ್ನಂತೆ ಚಿತ್ರಿಸಿದ್ದಾರೆ. ಜೊತೆಗೆ ಪುಟಿನ್ ಅವರನ್ನು ಹಿಟ್ಲರ್ ಎಂದು ಘೋಷಣೆಗಳನ್ನು ಸಹ ಕೂಗುತ್ತಿದ್ದಾರೆ.
ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಪಡೆಗಳನ್ನು ಉಕ್ರೇನ್ಗೆ ಕಳಿಸುವುದಿಲ್ಲ: ಜೋ ಬೈಡನ್ ಸ್ಪಷ್ಟನೆ