ETV Bharat / international

ಉಕ್ರೇನ್‌ ಮೇಲೆ ಮತ್ತಷ್ಟು ದಾಳಿ: ಮರಿಯುಪೋಲ್‌ನಲ್ಲಿ ದೊಡ್ಡ ಆಸ್ಪತ್ರೆ ವಶಕ್ಕೆ ಪಡೆದ ರಷ್ಯಾ ಸೇನೆ

ಉಕ್ರೇನ್‌ - ರಷ್ಯಾ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಮುರಿದ ಬೆನ್ನಲ್ಲೇ ಪುನಿಟ್‌ ಪಡೆಗಳು ಉಕ್ರೇನ್‌ ಮೇಲೆ ಮತ್ತಷ್ಟು ದೊಡ್ಡ ದಾಳಿಗಳನ್ನು ಮುಂದುವರಿಸಿದ್ದು, ಬಂದರು ನಗರಿ ಮರಿಯುಪೋಲ್‌ನಲ್ಲಿರುವ ಆಸ್ಪತ್ರೆಯನ್ನು ವಶಪಡಿಸಿಕೊಂಡಿವೆ ಎಂದು ವರದಿಯಾಗಿದೆ.

Russian troops seize hospital in Mariupol, take 500 hostage
ಉಕ್ರೇನ್‌ ಮೇಲೆ ಮತ್ತಷ್ಟು ದಾಳಿ; ಮಾರಿಯುಪೋಲ್‌ನಲ್ಲಿ ದೊಡ್ಡ ಆಸ್ಪತ್ರೆ ವಶಕ್ಕೆ ಪಡೆದ ರಷ್ಯಾ ಸೇನೆ
author img

By

Published : Mar 16, 2022, 8:11 AM IST

ಎಲ್ವಿವ್: ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ 20ನೇ ದಿನವಾದ ನಿನ್ನೆ ರಾತ್ರಿ ಮತ್ತೊಂದು ಭೀಕರ ದಾಳಿಯಲ್ಲಿ ಬಂದರು ನಗರಿ ಮರಿಯುಪೋಲ್‌ನಲ್ಲಿರುವ ಆಸ್ಪತ್ರೆಯನ್ನು ವಶಪಡಿಸಿಕೊಂಡಿವೆ. ಸುಮಾರು 500 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಪ್ರಾದೇಶಿಕ ನಾಯಕ ಪಾವ್ಲೊ ಕಿರಿಲೆಂಕೊ ಆರೋಪಿಸಿದ್ದಾರೆ.

ಮರಿಯುಪೋನಲ್ಲಿ ರಷ್ಯಾ ಸೈನಿಕರು ಹಲವು ಮನೆಗಳಿಂದ 400 ಜನರನ್ನು ಪ್ರಾದೇಶಿಕ ತೀವ್ರ ನಿಗಾ ಆಸ್ಪತ್ರೆಗೆ ಓಡಿಸಿದ್ದಾರೆ. ಸುಮಾರು 100 ವೈದ್ಯರು ಮತ್ತು ರೋಗಿಗಳು ಸಹ ಒಳಗೆ ಇದ್ದಾರೆ ಎಂದು ಕಿರಿಲೆಂಕೂ ಟೆಲಿಗ್ರಾಮ್ ಮೂಲಕ ಸಂದೇಶ ರವಾನಿಸಿದ್ದಾರೆ.

ಪುಟಿನ್‌ ಪಡೆಗಳು ಆಸ್ಪತ್ರೆಯ ಒಳಗಿರುವವರನ್ನು ಮಾನವ ಗುರಾಣಿಯಾಗಿ ಬಳಸುತ್ತಿವೆ. ಯಾರನ್ನೂ ಹೊರಗಡೆ ಬಿಡುತ್ತಿಲ್ಲ. ಆಸ್ಪತ್ರೆಯಿಂದ ಹೊರಹೋಗುವುದು ಅಸಾಧ್ಯವಾಗಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯ ಮುಖ್ಯ ಕಟ್ಟಡವು ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾಗಿದೆ. ಆದರೆ, ವೈದ್ಯಕೀಯ ಸಿಬ್ಬಂದಿ ನೆಲಮಾಳಿಗೆಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ವಾರ್ಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದ್ದಾರೆ. ಈ ಯುದ್ಧದ ನಿಯಮಗಳು ಮತ್ತು ಸಂಪ್ರದಾಯಗಳ ಸಂಪೂರ್ಣ ಉಲ್ಲಂಘನೆ, ಮಾನವೀಯತೆಯ ವಿರುದ್ಧದ ಘೋರ ಅಪರಾಧಗಳ ಬಗ್ಗೆ ಜಗತ್ತು ಧ್ವನಿ ಎತ್ತಬೇಕು ಎಂದು ಕೋರಿದರು.

ರಷ್ಯಾದ ಪಡೆಗಳು ನಗರದ ಪಶ್ಚಿಮ ಮತ್ತು ಪೂರ್ವ ಹೊರವಲಯದಿಂದ ನಗರವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿವೆ. ಈಗಾಗಲೇ ಹೆಚ್ಚಿನ ನಷ್ಟಗಳಾಗಿವೆ ಎಂದು ಉಕ್ರೇನ್‌ ಸೇನಾ ಜನರಲ್ ಸ್ಟಾಫ್ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೂರಕ್ಕೇರಿದ ಪತ್ರಕರ್ತರ ಸಾವಿನ ಸಂಖ್ಯೆ : ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಬಲಿಯಾದ ಪತ್ರಕರ್ತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಿನ್ನೆ ಫಾಕ್ಸ್‌ ನ್ಯೂಸ್‌ನ ಕ್ಯಾಮರಾಮನ್‌ ಹಾಗೂ ನಿರ್ಮಾಪಕರೊಬ್ಬರು ಮೃತಪಟ್ಟಿದ್ದಾರೆ.

ಕೀವ್‌ ಹೊರಭಾಗದಲ್ಲಿರುವ ಹೊರೆಂಕಾದಲ್ಲಿ ಪತ್ರಕರ್ತರಿದ್ದ ಕಾರು ಸಿಲುಕಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕ್ಯಾಮರಾಮನ್‌ ಪಿಯರೆ ಜಕ್ರೆಜ್‌ವಿಸ್ಕಿ ಹಾಗೂ ನಿರ್ಮಾಣ ಒಲೆಕ್ಸಾಂಡ್ರಾ ಕುರ್ಶಿನೋವಾ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಕದನದಲ್ಲಿ ಅಮೆರಿಕದ ಹವ್ಯಾಸಿ ಪತ್ರಕರ್ತರೊಬ್ಬರು ಬಲಿಯಾಗಿದ್ದರು.

ಇದನ್ನೂ ಓದಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಚೀನಾ ನೆರವು ವಿಚಾರ: ಎಲ್ಲವನ್ನೂ ಗಮನಿಸ್ತಿದ್ದೇವೆ ಎಂದ ಅಮೆರಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.