ETV Bharat / international

ಪ್ರಧಾನಿ ಮೋದಿ ಇಟಲಿ ಭೇಟಿ: ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉಭಯ ನಾಯಕರ ವ್ಯಾಪಕ ಮಾತುಕತೆ - ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಮೋದಿ ಮಾತುಕತೆ

ಪ್ರಧಾನಿ ಮೋದಿ ಇಟಲಿ ಪ್ರವಾಸದಲ್ಲಿದ್ದು, ಉಭಯ ನಾಯಕರು ಭಾರತ ಮತ್ತು ಇಟಲಿ ನಡುವಿನ ಸ್ನೇಹವನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ. ಆರ್ಥಿಕ ಸಂಬಂಧಗಳು, ಸಾಂಸ್ಕೃತಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹೆಚ್ಚು ಪರಿಸರ ಸ್ನೇಹಿ ಭೂಮಿಯನ್ನಾಗಿಸಲು ಒಟ್ಟಾಗಿ ಕೆಲಸ ಮಾಡಲು ಹೆಚ್ಚಿನ ಸಾಮರ್ಥ್ಯವಿದೆ, ”ಎಂದು ಸಭೆಯ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

PM Modi meets Italian counterpart holds extensive talks on diversifying bilateral ties
ಪ್ರಧಾನಿ ಮೋದಿ
author img

By

Published : Oct 30, 2021, 7:17 AM IST

ರೋಮ್​​: ಜಿ-20 ಶೃಂಗಸಭೆಯ ಹಿನ್ನೆಲೆ ಇಟಲಿ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರೊಂದಿಗೆ ಮೊದಲ ವೈಯಕ್ತಿಕ ಸಭೆ ನಡೆಸಿದರು.

ಇಟಲಿ ಪ್ರಧಾನಿ ಆಹ್ವಾನದ ಮೇರೆಗೆ ಮುಂಜಾನೆ ಆಗಮಿಸಿದ ಪ್ರಧಾನಿ ಮೋದಿ, ಡ್ರಾಘಿ ಅವರ ಅಧಿಕೃತ ನಿವಾಸ ಮತ್ತು ಮಂತ್ರಿ ಪರಿಷತ್ತಿನ ಸ್ಥಾನವಾದ ಪಲಾಝೊ ಚಿಗಿಗೆ ಭೇಟಿ ನೀಡಿದ್ದರು. ಈ ವೇಳೆ, ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ವೈವಿಧ್ಯಗೊಳಿಸಲು ಮತ್ತು ಹೆಚ್ಚು ಪರಿಸರ ಸ್ನೇಹಿಯಾಗಿ ಒಟ್ಟಾಗಿ ಕೆಲಸ ಮಾಡುವ ಕುರಿತು ವ್ಯಾಪಕ ಮಾತುಕತೆ ನಡೆಸಿದರು.

ಈ ಭೇಟಿ ಸಂತಸ ತಂದಿದೆ- ಪ್ರಧಾನಿ

"ರೋಮ್‌ನಲ್ಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆ. ನಾವು ಭಾರತ ಮತ್ತು ಇಟಲಿ ನಡುವಿನ ಸ್ನೇಹ ಬಲಪಡಿಸುವ ಮಾರ್ಗಗಳ ಬಗ್ಗೆ ಮಾತನಾಡಿದ್ದೇವೆ. ಆರ್ಥಿಕ ಸಂಬಂಧಗಳು, ಸಾಂಸ್ಕೃತಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹೆಚ್ಚು ಪರಿಸರ ಸ್ನೇಹಿ ಭೂಮಿಯನ್ನಾಗಿಸಲು ಒಟ್ಟಾಗಿ ಕೆಲಸ ಮಾಡಲು ಹೆಚ್ಚಿನ ಸಾಮರ್ಥ್ಯವಿದೆ, ”ಎಂದು ಸಭೆಯ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

COP26 ಹವಾಮಾನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ ಮತ್ತು ಉಭಯ ನಾಯಕರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಬೆಳವಣಿಗೆಗಳ ಬಗ್ಗೆ ಅವರು ಚರ್ಚಿಸಿದರು.

ಅಂತಾರಾಷ್ಟ್ರೀಯ ಪ್ರಯಾಣ ಸುಗಮದ ಬಗ್ಗೆಯೂ ಮಾತುಕತೆ

ಪರಸ್ಪರ ಲಸಿಕೆ ಪ್ರಮಾಣೀಕರಣದ ಬಗ್ಗೆ ಚರ್ಚಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶಗಳು ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ಕುರಿತಾಗಿಯೂ ಚರ್ಚಿಸಲಾಗಿದೆ ಎಂದು ಶ್ರಿಂಗ್ಲಾ ಹೇಳಿದರು.ಸಭೆಯಲ್ಲಿ, ಉಭಯ ಪ್ರಧಾನ ಮಂತ್ರಿಗಳು ಭಾರತ ಮತ್ತು ಇಟಲಿ ನಡುವಿನ ಸಹಕಾರದ ಇತರ ಕ್ಷೇತ್ರಗಳ ಬಗ್ಗೆಯೂ ಮಾತುಕತೆ ನಡೆಸಿದರು.

ದ್ವಿಪಕ್ಷೀಯ ಸಹಕಾರಕ್ಕೆ ಉಭಯ ನಾಯಕರ ಒತ್ತು

ನವೀಕರಿಸಬಹುದಾದ ಮತ್ತು ಶುದ್ಧ ಇಂಧನದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಪ್ರಚೋದನೆಯನ್ನು ನೀಡಲು, ಇಂಧನ ಪರಿವರ್ತನೆಯ ಮೇಲೆ ಭಾರತ ಮತ್ತು ಇಟಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸುವ ಜಂಟಿ ಹೇಳಿಕೆಯನ್ನು ನೀಡಲಾಗಿದೆ. ಮತ್ತು ದೊಡ್ಡ ಗಾತ್ರದ ಹಸಿರು ಕಾರಿಡಾರ್ ಯೋಜನೆ ಸ್ಮಾರ್ಟ್ ಗ್ರಿಡ್‌ಗಳು, ಶಕ್ತಿ ಸಂಗ್ರಹ ಪರಿಹಾರಗಳಂತಹ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ಒಪ್ಪಿಕೊಂಡಿವೆ.

ಅನಿಲ ಸಾಗಣೆ, ಸಮಗ್ರ ತ್ಯಾಜ್ಯ ನಿರ್ವಹಣೆ, ಜೈವಿಕ ಇಂಧನಗಳ ಪ್ರಚಾರ ದ್ವಿಮುಖ ಹೂಡಿಕೆಗಳ ಬಗ್ಗೆ ಉತ್ತಮ ಚರ್ಚೆ ನಡೆಯಿತು, ವಿಶೇಷವಾಗಿ ಶುದ್ಧ ಇಂಧನ ಮತ್ತು ನವೀಕರಿಸಬಹುದಾದ ವಲಯದಲ್ಲಿ ಇಟಲಿಯು ಸಾಕಷ್ಟು ಪರಿಣತಿಯನ್ನು ಹೊಂದಿದೆ. "ನಾವು ಹೇಗೆ ಮುಂದುವರಿಯಬಹುದು ಎಂಬುದನ್ನು ನೋಡಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.

2020-25 ರ ಕ್ರಿಯಾ ಯೋಜನೆ ಪರಿಶೀಲಿಸಿದ ನಾಯಕರು

ಭಾರತ-ಇಟಲಿ ದ್ವಿಪಕ್ಷೀಯ ಪಾಲುದಾರಿಕೆಯ 2020-2025 ರ ಕ್ರಿಯಾ ಯೋಜನೆಯನ್ನು ಇಬ್ಬರು ಪ್ರಧಾನ ಮಂತ್ರಿಗಳು ಪರಿಶೀಲಿಸಿದ್ದಾರೆ ಮತ್ತು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಟ್ವೀಟ್ ಮಾಡಿದ್ದಾರೆ.

ಯುರೋಪಿಯನ್​ ಒಕ್ಕೂಟದಲ್ಲಿ ಭಾರತದ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಇಟಲಿಯೂ ಸೇರಿದೆ. ಇಟಾಲಿಯನ್ ಆಮದುಗಳ ಮೂಲ ದೇಶವಾಗಿ ಭಾರತವು 19 ನೇ ಸ್ಥಾನದಲ್ಲಿದೆ, ಇಟಾಲಿಯನ್ ಆಮದುಗಳಲ್ಲಿ ಭಾರತದ ಪಾಳು 1.2 ಪ್ರತಿಶತದಷ್ಟಿದೆ.

ಇನ್ನು "ನನ್ನ ಇಟಲಿ ಭೇಟಿಯ ಸಮಯದಲ್ಲಿ, ನಾನು ವ್ಯಾಟಿಕನ್ ನಗರಕ್ಕೆ ಭೇಟಿ ನೀಡುತ್ತೇನೆ, ಅವರ ಪವಿತ್ರ ಪೋಪ್ ಫ್ರಾನ್ಸಿಸ್ ಅವರನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ, ಹಿಸ್ ಎಮಿನೆನ್ಸ್ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಅವರನ್ನು ಭೇಟಿಯಾಗುತ್ತೇನೆ" ಎಂದು ಮೋದಿ ಹೇಳಿದರು. ಅದಾದ ಬಳಿಕ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ರೋಮ್‌ನಿಂದ ಮೋದಿಯವರು ಯುಕೆಯ ಗ್ಲಾಸ್ಗೋಗೆ ತೆರಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.