ಲಂಡನ್: ಭಯೋತ್ಪಾದನೆಯ ನಿರ್ಮೂಲನೆಯ ಕುರಿತಂತೆ ಪಾಕಿಸ್ತಾನ ಇನ್ನೂ ಸುಧಾರಿಸಿಲ್ಲ ಎನ್ನುವ ಗ್ಲೋಬಲ್ ವಾಚ್ಡಾಗ್ ಹೇಳಿಕೆಗೆ ಸದ್ಯ ಪಾಕಿಸ್ತಾನದ ಸೇನಾ ಮುಖ್ಯಸ್ಥ ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮ ದೇಶ ಉಗ್ರರ ನಿರ್ಮೂಲನೆ ವಿಚಾರದಲ್ಲಿ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಶಕ್ತಿಮೀರಿ ಪ್ರಯತ್ನಿಸುತ್ತಿದೆ" ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.
ಟೆರರ್ ಫಂಡಿಂಗ್ ನಿಲ್ಲಿಸದಿದ್ದರೆ ಕಪ್ಪುಪಟ್ಟಿಗೆ ಪಾಕ್! ವಾಚ್ಡಾಗ್ ವಾರ್ನ್
ಲಂಡನ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ, "ಭಯೋತ್ಪಾದನೆಯನ್ನು ಮಟ್ಟಹಾಕುವ ವಿಚಾರದಲ್ಲಿ ಎಲ್ಲ ದೇಶಗಳು ಒಂದಾಗಿ ಸಹಕಾರ ನೀಡಬೇಕು" ಎಂದಿದ್ದಾರೆ.
"ನೆರೆಯ ದೇಶಗಳು ಉಗ್ರರ ನಿರ್ಮೂಲನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು. ಈಗಾಗಲೇ ಭಯೋತ್ಪಾದನೆಯಿಂದ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ, ಭವಿಷ್ಯದಲ್ಲಿ ಇದು ಮರುಕಳಿಸಲು ನಾವು ಇಷ್ಟಪಡುವುದಿಲ್ಲ" ಎಂದು ಖಮರ್ ಜಾವೇದ್ ಬಾಜ್ವ ಹೇಳಿದ್ದಾರೆ.