ETV Bharat / international

ಯುದ್ಧದ ವೇಳೆ ಚರ್ಚೆಗೀಡಾದ ನ್ಯೂಯಾರ್ಕ್​ ಟೈಮ್ಸ್​ನ ಮುಖಪುಟ ಫೋಟೋ - ಉಕ್ರೇನ್​ನಲ್ಲಿ ಯುದ್ಧದಿಂದ ಪರಿಣಾಮ

ನಾನು ಯಾವುದಾದರೂ ಒಂದು ಘಟನೆಯನ್ನು ನೋಡುವವರೆಗೆ ಯಾವುದನ್ನೂ ನಂಬುವುದಿಲ್ಲ. ನಾನು ಯುದ್ಧವನ್ನು ಸಾಕಷ್ಟು ದಿನಗಳಿಂದ ಕವರ್ ಮಾಡುತ್ತಿದ್ದೇನೆ. ಇದು ನಾಗರಿಕರನ್ನು ಗುರಿಯಾಗಿಸಿ, ರಷ್ಯಾ ದಾಳಿಯನ್ನು ನಡೆಸುತ್ತಿದೆ ಎಂಬುದನ್ನು ಈ ಫೋಟೋ ಸಾಬೀತುಪಡಿಸುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆ ಹೇಳಿದ್ದಾರೆ.

NY Times images of slain Ukrainian civilians show war's toll
ಯುದ್ಧದ ವೇಳೆ ಚರ್ಚೆಗೀಡಾದ ನ್ಯೂಯಾರ್ಕ್​ ಟೈಮ್ಸ್​ನ ಮುಖಪುಟ ಫೋಟೋ
author img

By

Published : Mar 8, 2022, 7:12 AM IST

ನ್ಯೂಯಾರ್ಕ್​(ಅಮೆರಿಕ): ಮಾಧ್ಯಮಕ್ಕೆ ತನ್ನದೇ ಸಂಹಿತೆಯಿದೆ. ಜನರನ್ನು ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಲು ಮಾಧ್ಯಮಗಳು ಯಾವಾಗಲೂ ಯತ್ನಿಸುತ್ತಿರುತ್ತವೆ. ಅಪರಾಧ ಸುದ್ದಿಗಳ ವಿಚಾರದಲ್ಲಿ ಹಿಂಸಾತ್ಮಕ ಮತ್ತು ಸಂವೇದನಾರಹಿತ ಸುದ್ದಿಗಳು ಮತ್ತು ಚಿತ್ರಗಳನ್ನು ಪ್ರಕಟಿಸುವಾಗ ಸದಾ ತನ್ನ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಚಿತ್ರಗಳು ವಿಚಾರದಲ್ಲೂ ಕೂಡಾ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ರಕ್ತಸಿಕ್ತ ಫೋಟೋಗಳಿಂದ ದೂರವಿರುವುದು ಮತ್ತು ಬ್ಲರ್ ಮಾಡುವ ಪದ್ಧತಿಯಿದೆ. ಆದರೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್​ನ ಬೇರೆ ಚರ್ಚೆಯನ್ನೇ ಹುಟ್ಟುಹಾಕಿದೆ.

ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರವಾಗಿದೆ. ಈಗಾಗಲೇ ಸಾಕಷ್ಟು ಮಂದಿ ಯುದ್ಧ ಪೀಡಿತ ಪ್ರದೇಶಗಳಿಂದ ಪಲಾಯನ ಮಾಡುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್​ನ ಮೊದಲ ಪುಟದಲ್ಲಿ ಮಾರ್ಚ್​ 7ರಂದು (ಸೋಮವಾರ) ಫೋಟೋ ಪ್ರಕಟವಾಗಿದ್ದು, ಯುದ್ಧದ ಭೀಕರತೆಯನ್ನು ಬಿಚ್ಚಿಡುತ್ತದೆ.

  • WARNING: GRAPHIC IMAGES: Today I witnessed Russian troops deliberately targeting civilians fleeing for their lives from the village of Irpin. At least three members of a family of four were killed in front of me. @nytimes https://t.co/lR0a5FRpXX

    — lynsey addario (@lynseyaddario) March 6, 2022 " class="align-text-top noRightClick twitterSection" data=" ">

ಫೋಟೋದಲ್ಲಿರುವಂತೆ ನಾಲ್ಕು ಮಂದಿ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಅವರು ಉಕ್ರೇನ್​​ನಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಫೋಟೋ ತೆಗೆದ ನ್ಯೂಯಾರ್ಕ್ ಟೈಮ್ಸ್​ನ ಪತ್ರಕರ್ತೆ ಲಿನ್ಸೆ ಅಡ್ಡಾರಿಯೋ ರಷ್ಯಾ ಪಡೆಗಳ ಶೆಲ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ನನ್ನ ಮುಂದೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ಟ್ವಿಟರ್​ನಲ್ಲಿ ಫೋಟೋ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದಾದರೂ ಒಂದು ಘಟನೆಯನ್ನು ನೋಡುವವರೆಗೆ ಯಾವುದನ್ನೂ ನಂಬುವುದಿಲ್ಲ. ನಾನು ಯುದ್ಧವನ್ನು ಸಾಕಷ್ಟು ದಿನಗಳಿಂದ ಕವರ್ ಮಾಡುತ್ತಿದ್ದೇನೆ. ಇದು ನಾಗರಿಕರನ್ನು ಗುರಿಯಾಗಿಸಿ, ರಷ್ಯಾ ದಾಳಿಯನ್ನು ನಡೆಸುತ್ತಿದೆ ಎಂಬುದನ್ನು ಈ ಫೋಟೋ ಸಾಬೀತುಪಡಿಸುತ್ತದೆ. ಈ ಫೋಟೋ ತುಂಬಾ ದೂರದವರೆಗೆ ತಲುಪುತ್ತದೆ ಎಂಬುದು ಮುಖ್ಯ ಎಂದು ಲಿನ್ಸೆ ಅಡ್ಡಾರಿಯೋ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್​​ಗೆ ₹1,768 ಕೋಟಿ ನೆರವು ಘೋಷಿಸಿದ ಬ್ರಿಟನ್​

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಭಾನುವಾರ ತಡರಾತ್ರಿ ಘಟನೆಯ ಬಗ್ಗೆ ಮಾಹಿತಿ ನೀಡಿ, ಫೋಟೋ ಟ್ವೀಟ್ ಮಾಡಿತ್ತು. ಹಿಂಸೆಯ ಕುರಿತು ಈ ಫೋಟೋ ಇದೆ ಎಂದು ಟ್ವೀಟ್​ನಲ್ಲಿ ಎಚ್ಚರಿಕೆ ನೀಡಿತ್ತು. ಆದರೂ, ಆ ಫೋಟೋವನ್ನು ತನ್ನ ವೆಬ್​​ಸೈಟ್​ನಲ್ಲಿ ಯಾವುದೇ ಬ್ಲರ್ ಮಾಡದೇ ಬಳಸಲಾಗಿದೆ. ದಿ ನ್ಯೂಯಾರ್ಕ್​ ಟೈಮ್ಸ್‌ನ ಡೆಪ್ಯುಟಿ ಮ್ಯಾನೇಜಿಂಗ್ ಎಡಿಟರ್ ಕ್ಲಿಫ್ ಲೆವಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಅಡ್ಡಾರಿಯೋ ಅವರ ಫೋಟೋ ಅತ್ಯಂತ ಪ್ರಮುಖವಾಗಿದೆ ಎಂದಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾಲಯದ ಇಂಟರ್‌ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಸ್ಕೂಲ್‌ನ ಮಾಜಿ ಡೀನ್ ಫ್ರೆಡ್ ರಿಚಿನ್ ಆಗಿರುವ ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ವ್ಯಕ್ತಿಗಳ ಗೌಪ್ಯತೆಯನ್ನು ಗೌರವಿಸುವ ರೀತಿಯಲ್ಲಿ ಬಳಸಲ್ಪಟ್ಟಿದೆ ಎಂದು ನಾನು ಭಾವಿಸುತ್ತೇನೆ. ನಾಗರಿಕರನ್ನು ತಮ್ಮ ಸೈನಿಕರು ಗುರಿಯಾಗಿಸಿಕೊಂಡಿಲ್ಲ ಎಂದು ರಷ್ಯಾ ಹೇಳಿಕೊಳ್ಳುತ್ತಿದ್ದು, ಈ ಫೋಟೋ ರಷ್ಯಾದ ಕ್ರೂರತನವನ್ನು ತೋರಿಸಲು ಸಾಕ್ಷಿಯಾಗಿದೆ ಎಂದಿದ್ದಾರೆ.

ಯುದ್ಧ ಮತ್ತು ಇತರ ಹಿಂಸಾತ್ಮಕ ಘಟನೆಗಳ ಕವರ್ ಮಾಡುವಾಗ ತೊಂದರೆಯುಂಟುಮಾಡುವ, ಆಘಾತಕಾರಿಯೂ ಸಹ ಚಿತ್ರಗಳು ಇರುತ್ತವೆ. ಪತ್ರಿಕೆ ಅಥವಾ ದೂರದರ್ಶನದಲ್ಲಿ ಲಭ್ಯವಿಲ್ಲದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತವೆ. ಆಗ ಯಾವ ಫೋಟೋವನ್ನು ತೋರಿಸಬೇಕು. ಯಾವ ಫೋಟೋವನ್ನು ತೋರಿಸಬಾರದು ಎಂಬ ನಿರ್ಧಾರವನ್ನು ಆಗಾಗ ಸಂಪಾದಕರು ತೆಗೆದುಕೊಳ್ಳಬೇಕು ಎಂದು ರಿಚಿನ್ ಹೇಳಿದ್ದಾರೆ. ಇನ್ನೂ ಕೆಲವರು ಈ ಚಿತ್ರ ಕೆಲವೊಂದು ವಿಚಾರಗಳನ್ನು ಯುದ್ಧದ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.