ಸ್ಟಾಕ್ಹೋಮ್: “ಜೀನೋಮ್ ಎಡಿಟಿಂಗ್ ಗೆ ವಿಧಾನ ಅಭಿವೃದ್ಧಿಪಡಿಸಿದ್ದಕ್ಕಾಗಿ" ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಎ. ಡೌಡ್ನಾ ಅವರಿಗೆ 2020 ರ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈಗಾಗಲೇ ವೈದ್ಯಕೀಯ ಹಾಗೂ ಭೌತಶಾಸ್ತ್ರ ವಿಭಾಗದ ನೊಬೆಲ್ ಘೋಷಣೆ ಆಗಿದೆ.
ಈ ಗೌರವವು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳಲಾಗುವ ಹಾಗೂ ವ್ಯಾಪಕ ಬಳಕೆಯಲ್ಲಿರುವ ಪ್ರಯೋಗದ ಫಲಿತಾಂಶಗಳಿಗಾಗಿ ನೀಡಲಾಗುತ್ತಿದೆ. ಉದಾಹರಣೆಗೆ ಕಳೆದ ವರ್ಷ ಲಿಥಿಯಂ - ಐಯಾನ್ ಬ್ಯಾಟರಿ ಮೇಲಿನ ಪ್ರಯೋಗಗಳಿಗಾಗಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
ಪಿತ್ತಜನಕಾಂಗವನ್ನು ಹಾಳುಮಾಡುವ ಹೆಪಟೈಟಿಸ್ ಸಿ ವೈರಸ್ ಅನ್ನು ಕಂಡುಹಿಡಿದಿದ್ದಕ್ಕಾಗಿ ಅಮೆರಿಕದ ಹಾರ್ವೆ ಜೆ ಆಲ್ಟರ್ ಮತ್ತು ಚಾರ್ಲ್ಸ್ ಎಂ. ರೈಸ್ ಮತ್ತು ಬ್ರಿಟಿಷ್ ಮೂಲದ ವಿಜ್ಞಾನಿ ಮೈಕೆಲ್ ಹೌಟನ್ ಅವರಿಗೆ ಸೋಮವಾರ ನೊಬೆಲ್ ಸಮಿತಿ, ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಭೌತಶಾಸ್ತ್ರಕ್ಕಾಗಿ ಬ್ರಿಟನ್‌ನ ರೋಜರ್ ಪೆನ್ರೋಸ್, ಕಾಸ್ಮಿಕ್ ಕಪ್ಪು ಕುಳಿಗಳ ರಹಸ್ಯಗಳನ್ನು ಭೇದಿಸಿದ್ದಕ್ಕಾಗಿ ಜರ್ಮನಿಯ ರೀನ್‌ಹಾರ್ಡ್ ಗೆನ್ಜೆಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಆಂಡ್ರಿಯಾ ಘೆಜ್ ಅವರಿಗೆ ಪುರಸ್ಕಾರ ಘೋಷಣೆ ಮಾಡಲಾಗಿದೆ.