ಲಂಡನ್( ಇಂಗ್ಲೆಂಡ್): ಕೋವಿಡ್ ವಿರುದ್ಧ ಹೋರಾಡಲು ಆಕ್ಸ್‌ಫರ್ಡ್ ಹಾಗೂ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಗಳ ಕಂಡುಹಿಡಿದ ವಿಜ್ಞಾನಿಗಳ ತಂಡವು ಮುಂದೆ ಬರಲಿರುವ ವೈರಸ್ ಇನ್ನಷ್ಟು ಅಪಾಯಕಾರಿಯಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಎದುರಾಗಲಿರುವ ವೈರಸ್ ಹೆಚ್ಚು ಅಪಾಯಕಾರಿ ಹಾಗೂ ಮಾರಕವಾಗಿರಲಿದೆ ಎಂದಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನ ವ್ಯಾಕ್ಸಿನಾಲಜಿಯ ಪ್ರಾಧ್ಯಾಪಕ ಪ್ರೊಫೆಸರ್ ಸಾರಾ ಗಿಲ್ಬರ್ಟ್, ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರಕ್ಕಾಗಿ ರಾಣಿ ಎಲಿಜಬೆತ್ II ರಿಂದ ಪ್ರಶಂಸಿಸಲ್ಪಟ್ಟಿದ್ದಾರೆ. ಇವರ ಪ್ರಕಾರ, ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ, ಅಧ್ಯಯನಗಳು, ನಿಧಿಗಳ ಅಗತ್ಯವಿದೆ ಎಂದಿದ್ದಾರೆ.
ಕಾಯಿಲೆ ವಿರುದ್ಧ ಹೋರಾಡುತ್ತದೆಯೇ ಹೊರತು ಸಾವಿನಿಂದ ರಕ್ಷಣೆ ಅಲ್ಲ
ಜೊತೆಗೆ ಈಗಾಗಲೇ ವಿಶ್ವಕ್ಕೆ ಭೀತಿ ಹುಟ್ಟಿಸಿರುವ ಒಮಿಕ್ರಾನ್ ವೈರಸ್ನ ವಿರುದ್ಧದ ಹೋರಾಟದಲ್ಲಿ ಈಗಿರುವ ಲಸಿಕೆಗಳು ಕಡಿಮೆ ಪರಿಣಾಮಕಾರಿಯಾಗಬಹುದು ಎಂದಿದ್ದು, ಸೋಂಕು ಮತ್ತು ಇತರ ಕಾಯಿಲೆಯ ವಿರುದ್ಧ ಹೋರಾಡುತ್ತದೆಯಾದರೂ ಸಾವಿನಿಂದ ರಕ್ಷಣೆ ನೀಡುತ್ತದೆ ಎಂದರ್ಥವಲ್ಲ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೈರಸ್ ನಮ್ಮ ಜೀವನಕ್ಕೆ ಬೆದರಿಕೆ ಒಡ್ಡುವುದು ಇದು ಕೊನೆಯ ಬಾರಿಯಲ್ಲ. ಸತ್ಯವೆಂದರೆ ಭವಿಷ್ಯದಲ್ಲಿ ವೈರಸ್ ಇನ್ನಷ್ಟು ಭೀರಕವಾಗಿರಲಿದೆ. ಇದು ಹೆಚ್ಚು ಸಾಂಕ್ರಾಮಿಕ ಅಥವಾ ಮಾರಣಾಂತಿಕ ಅಥವಾ ಎರಡೂ ಆಗಿರಬಹುದು ಎಂದು ಸಂಶೋಧಕರ ತಂಡ ಹೇಳಿದೆ.
ಒಮಿಕ್ರಾನ್ ವೈರಸ್ ಬಹಳ ಬೇಗ ಹರಡಬಹುದಾದ ಸ್ಪೈಕ್ ಪ್ರೋಟಿನ್ನಿಂದ ಕೂಡಿದೆ ಹಾಗಾಗಿ ಅತೀ ವೇಗವಾಗಿ ಹರಡುತ್ತಾ ರೂಪಾಂತರವಾಗುತ್ತಿದೆ ಎಂದು ಪ್ರೊ.ಗಿಲ್ಬರ್ಟ್ ಹೇಳಿದ್ದಾರೆ. ಇದೆಲ್ಲದರ ನಡುವೆ ಲಂಡನ್ಲಿಲ್ಲಿ ನಿತ್ಯ 25 ಸಾವಿರ ಮಂದಿಗೆ ಕೋವಿಡ್ ದೃಢಪಡುತ್ತಿದೆ. ಜೊತೆಗೆ 246 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ಒಮಿಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾಗೆ ನೇರ ವಿಮಾನ ಸೇವೆ ನಿರ್ಬಂಧ ಬೇಸರ ತಂದಿದೆ - ವಿಶ್ವ ಆರೋಗ್ಯ ಸಂಸ್ಥೆ