ಕೈವ್ (ಉಕ್ರೇನ್): ಬೆಲಾರಸ್ನ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮರು ಚುನಾವಣೆಯಲ್ಲಿ ಆರನೇ ಅವಧಿಗೆ ಆಯ್ಕೆಯಾದ ಸುಮಾರು ಮೂರು ತಿಂಗಳ ನಂತರವೂ, ಪ್ರತಿಭಟನಾಕಾರರು ಬೆಲಾರಸ್ ನಗರಗಳಲ್ಲಿನ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಆಗಸ್ಟ್ 9ರ ಚುನಾವಣೆಯ ಬಳಿಕ ಪ್ರತಿಭಟನೆ ಪ್ರಾರಂಭವಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಸ್ಟನ್ ಗ್ರೆನೇಡ್ ಮತ್ತು ರಬ್ಬರ್ ಗುಂಡುಗಳನ್ನು ಹೊಡೆದಿದ್ದಾರೆ. ಸಾವಿರಾರು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೂ ಪ್ರತಿಭಟನೆಗಳು ಹೆಚ್ಚಾಗಿವೆ.
ಪ್ರತಿಭಟನೆ ಪ್ರಾರಂಭವಾದ ಬಳಿಕ ಕಳೆದ ಭಾನುವಾರ ಅತಿದೊಡ್ಡ ರ‍್ಯಾಲಿ ನಡೆದಿದ್ದು, ಅದರಲ್ಲಿ ಸುಮಾರು 200,000 ಪ್ರತಿಭಟನಾಕಾರರು ಭಾಗಿಯಾಗಿದ್ದರು. ನಾಳೆ ಮತ್ತೊಂದು ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದೆ.
ಲುಕಾಶೆಂಕೊ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಾವಿರಾರು ವಿದ್ಯಾರ್ಥಿಗಳು, ನಿವೃತ್ತರು ಹಾಗೂ ವ್ಯಾಪಾರಿಗಳು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.