ಹೈದರಾಬಾದ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಿದ್ದರೆ, ಇತ್ತ ಹೈದರಾಬಾದ್‌ನಲ್ಲಿ ಉಕ್ರೇನ್ ಯುವತಿಯೊಬ್ಬಳು ಇಲ್ಲಿನ ತನ್ನ ಪ್ರಿಯಕರನೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾಳೆ.
ಹೈದರಾಬಾದ್ ಮೂಲದ ಪ್ರತೀಕ್, ಉಕ್ರೇನ್ನ ಲ್ಯುಬೊವ್ ಮದುವೆಯಾದ ನವದಂಪತಿ. ಉಕ್ರೇನ್ನಲ್ಲಿ ಯುದ್ಧ ಆರಂಭವಾಗುವುದಕ್ಕೂ ಮುನ್ನ ಅಂದರೆ ಕಳೆದ ವಾರ ಭಾರತಕ್ಕೆ ಬಂದಿದ್ದ ಇವರು ಸೋಮವಾರದಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.
ಮೊದಲ ನೋಟದಲ್ಲೇ ಪ್ರೀತಿ: ಹೈದರಾಬಾದ್ನ ಪ್ರತೀಕ್ ವ್ಯಾಸಂಗಕ್ಕೆಂದು ಉಕ್ರೇನ್ಗೆ ತೆರಳಿದ್ದರು. ಈ ವೇಳೆ ಲ್ಯುಬೊವ್ಳ ಮೇಲೆ ಪ್ರತೀಕ್ಗೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಮದುವೆಯಾಗಲು ಇಚ್ಚಿಸಿದ್ದರು. ಆದರೆ, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಭೀತಿಯಿಂದಾಗಿ ಅವರು ಭಾರತಕ್ಕೆ ಆಗಮಿಸಿದ್ದಾರೆ. ಅದು ರಷ್ಯಾ ದಾಳಿಗೂ ಒಂದು ದಿನ ಮುಂಚೆ. ಅದಕ್ಕೂ ಮುನ್ನ ಇಬ್ಬರು ಉಕ್ರೇನ್ನಲ್ಲಿ ಅಲ್ಲಿನ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಬಳಿಕ ಫೆ.23 ರಂದು ಭಾರತಕ್ಕೆ ಬಂದ ಬಳಿಕ ಹೈದ್ರಾಬಾದ್ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಚ್ಚಿಸಿ ನಿನ್ನೆ(ಸೋಮವಾರ) ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಉಕ್ರೇನ್ನಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಅಲ್ಲದೇ ಉಕ್ರೇನ್ನಲ್ಲಿ ಶೀಘ್ರ ಯುದ್ಧ ನಿಂತು ಶಾಂತಿ ನೆಲೆಸಲಿ ಎಂದು ಕೋರಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು.. ಮನೆಯಲ್ಲಿ ಮಡುಗಟ್ಟಿದ ಶೋಕ