ETV Bharat / international

ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ...ರಷ್ಯಾದ ಮೊದಲ ಟಾರ್ಗೆಟ್​ ಉಕ್ರೇನ್​ ಅಧ್ಯಕ್ಷ ಜೆಲೆನ್​ಸ್ಕಿ? - Russia Ukraine Crisis News

ರಷ್ಯಾ ಮತ್ತು ಉಕ್ರೇನ್​ ನಡುವಿನ ಕಾದಾಟ ಭೀಕರತೆ ಪಡೆಯುತ್ತಿದೆ. ಈ ಮಧ್ಯೆಯೇ ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ ಇರುವ 'Z' ಎಂಬ ಅಕ್ಷರ ಅದು ಉಕ್ರೇನ್ ಅಧ್ಯಕ್ಷ ಜೆಲೆನ್​ಸ್ಕಿ ಅವರ ಹೆಸರಿನ ಮೊದಲ ಅಕ್ಷರವಾಗಿದ್ದು, ಅವರೇ ಈ ಯುದ್ಧದ ಮೊದಲ ಟಾರ್ಗೆಟ್​ ಆಗಿದ್ದಾರೆ ಎಂದು ಹೇಳಲಾಗಿದೆ.

zelensky
ಜೆಲೆನ್​ಸ್ಕಿ
author img

By

Published : Feb 25, 2022, 12:47 PM IST

Updated : Feb 25, 2022, 12:53 PM IST

ಕೀವ್​: ರಷ್ಯಾ ಮತ್ತು ಉಕ್ರೇನ್​ ನಡುವಿನ ಕಾದಾಟ ಭೀಕರತೆ ಪಡೆಯುತ್ತಿದೆ. ಈ ಮಧ್ಯೆಯೇ ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ ಇರುವ 'Z' ಎಂಬ ಅಕ್ಷರ ಕುತೂಹಲ ಕೆರಳಿಸಿದೆ. ರಷ್ಯಾ ಆಪರೇಷನ್​ 'ಝಡ್​' ಹೆಸರಿನಲ್ಲಿ ಯುದ್ಧ ಸಾರಿದೆ ಎಂದು ಹೇಳಲಾಗಿದೆ. Z ಎಂಬುದು ಉಕ್ರೇನ್ ಅಧ್ಯಕ್ಷ ಜೆಲೆನ್​ಸ್ಕಿ ಅವರ ಹೆಸರಿನ ಮೊದಲ ಅಕ್ಷರವಾಗಿದೆ. ಅವರೇ ಈ ಯುದ್ಧದ ಮೊದಲ ಟಾರ್ಗೆಟ್​ ಆಗಿದ್ದಾರಾ ಎಂಬುದು ಅನುಮಾನ ಮೂಡಿಸಿದೆ.

ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ
ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ

ಈ ಬಗ್ಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಕೂಡ ಶಂಕಿಸಿದ್ದು, ನಾನೇ ಅವರ ನಂಬರ್​ ಒನ್​ ಶತ್ರುವಾದ ಕಾರಣ ರಷ್ಯಾ ತನ್ನ ದೇಶದ ಮೇಲೆ ದಾಳಿ ಮಾಡಿದೆ. ಬಳಿಕ ನನ್ನ ಕುಟುಂಬ ಅವರ ಎರಡನೇ ಗುರಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ
ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ

ರಾಷ್ಟ್ರದ ಮುಖ್ಯಸ್ಥನನ್ನು ಮೊದಲು ನಾಶ ಮಾಡಿ, ಬಳಿಕ ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ನಾಮ ಮಾಡುವುದು ರಷ್ಯಾದ ಪ್ರಬಲ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ರಷ್ಯಾ ಯುದ್ಧ ಟ್ಯಾಂಕರ್​ಗಳ ಮೇಲೆ 'ಝಡ್​' ಎಂದು ನಮೂದಿಸಿ ಆಪರೇಷನ್​ Z ಹೆಸರಿನಲ್ಲಿ ಉಕ್ರೇನ್​ ಮೇಲೆ ಯುದ್ಧ ಸಾರಿದೆ ಎಂದು ಶಂಕಿಸಲಾಗಿದೆ.

ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ
ರಷ್ಯಾದ ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ

ನಾನು ರಾಜಧಾನಿ ಕೀವ್​ನಲ್ಲೇ ಇದ್ದೇವೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ. ಉಕ್ರೇನ್​ನಲ್ಲಿರುವ ರಷ್ಯಾದ ನಾಗರಿಕರ ರಕ್ಷಣೆ ಉದ್ದೇಶದಿಂದ ಅದು ಈ ಯುದ್ಧ ಸಾರಿಲ್ಲ. ರಷ್ಯಾದ ಈ ಹೇಳಿಕೆ ಆಧಾರರಹಿತ ಎಂದು ವೊಲೊಡಿಮಿರ್ ಜೆಲೆನ್​ಸ್ಕಿ ಹೇಳಿದ್ದಾರೆ.

ಓದಿ: ಉಕ್ರೇನ್​ನಲ್ಲಿ ಕರ್ನಾಟಕದ 281 ಎಂಬಿಬಿಎಸ್‌ ವಿದ್ಯಾರ್ಥಿಗಳು: ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ

Last Updated : Feb 25, 2022, 12:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.