ಜೆರುಸಲೇಂ/ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಭಾರತ ಪ್ರಧಾನಿ ನರೆಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಹೊರಾಟಕ್ಕೆ ತುಂಬಾ ಅವಶ್ಯಕವಾಗಿರುವ ಕ್ಲೋರೋಕ್ವಿನ್ ಔಷಧ, ಈಗ ಜಗತ್ತಿನ ಹಲವು ರಾಷ್ಟ್ರಗಳಿಗೆ ಬಲು ಅಗತ್ಯವಾಗಿದೆ. ಇದೇ ವಿಚಾರವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರತೀಕಾರದ ಎಚ್ಚರಿಕೆಯನ್ನೂ ಭಾರತಕ್ಕೆ ನೀಡಿದ್ದರು.
ಆ ಬಳಿಕ ಜಗತ್ತಿನಲ್ಲಿ ಕೊರೊನಾದಿಂದ ಒದ್ದಾಡಿ, ಔಷಧ ತುಂಬಾ ಅಗತ್ಯವಿರುವ ರಾಷ್ಟ್ರಗಳಿಗೆ ಔಷಧಿ ಪೂರೈಸುವುದಾಗಿ ಮೋದಿ ಹೇಳಿದ್ದರು. ಅದರಂತೆ ಇಸ್ರೇಲ್ ಸೇರಿದಂತೆ ಕೆಲ ರಾಷ್ಟ್ರಗಳಿಗೆ ಭಾರತ ಔಷಧ ಪೂರೈಸಿದೆ.
ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ಕ್ಲೋರೋಕ್ವಿನ್ ಔಷಧಿಯನ್ನು ಇಸ್ರೇಲ್ಗೆ ಕಳುಹಿಸಿದ್ದಕ್ಕಾಗಿ ನನ್ನ ಪ್ರೀತಿಯ ಗೆಳೆಯ ನರೇಂದ್ರ ಮೋದಿಯವರಿಗೆ ಧನ್ಯವಾದ. ಇಡೀ ಇಸ್ರೇಲ್ ಜನತೆ ನಿಮಗೆ ಧನ್ಯವಾದ ತಿಳಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
-
Thank you, my dear friend @narendramodi, Prime Minister of India, for sending Chloroquine to Israel.
— PM of Israel (@IsraeliPM) April 9, 2020 " class="align-text-top noRightClick twitterSection" data="
All the citizens of Israel thank you! 🇮🇱🇮🇳 pic.twitter.com/HdASKYzcK4
">Thank you, my dear friend @narendramodi, Prime Minister of India, for sending Chloroquine to Israel.
— PM of Israel (@IsraeliPM) April 9, 2020
All the citizens of Israel thank you! 🇮🇱🇮🇳 pic.twitter.com/HdASKYzcK4Thank you, my dear friend @narendramodi, Prime Minister of India, for sending Chloroquine to Israel.
— PM of Israel (@IsraeliPM) April 9, 2020
All the citizens of Israel thank you! 🇮🇱🇮🇳 pic.twitter.com/HdASKYzcK4
ಇನ್ನು ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ಜಂಟಿಯಾಗಿ ಹೋರಾಡಬೇಕಿದೆ. ತನ್ನ ಮಿತ್ರ ರಾಷ್ಟ್ರಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧವಿದೆ. ಇಸ್ರೇಲ್ ದೇಶದ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.