ETV Bharat / international

ರೊಮೇನಿಯಾ ಗಡಿಯಲ್ಲಿ ಸಿಲುಕಿದ ಭಾರತೀಯರು.. ಉಕ್ರೇನ್​ನಲ್ಲಿರಲಾಗ್ತಿಲ್ಲ, ಸ್ವದೇಶಕ್ಕೆ ಬರಲಾಗದೇ ಅತಂತ್ರ, ಅಭದ್ರತೆಯ ಆತಂಕ..

ಊಟ, ನೀರಿನ ಕೊರತೆಯಿಂದ ಕಂಗಾಲಾಗಿರುವ ಭಾರತೀಯರು ಆದಷ್ಟು ಬೇಗ ತಮ್ಮನ್ನು ಇಲ್ಲಿಂದ ತೆರವು ಮಾಡಬೇಕು. ತಾವು ತಂಗಿರುವ ಪ್ರದೇಶದ ಸುತ್ತಲೂ ರಷ್ಯಾದ ಬಾಂಬ್​ಗಳು ಸ್ಫೋಟಗೊಳ್ಳುತ್ತಿವೆ. ಇಲ್ಲಿ ನೀಡಲಾಗುತ್ತಿರುವ ಊಟವೂ ಕೂಡ ಸಾಲದಾಗಿದೆ. ಇನ್ನೆರಡು ದಿನಗಳಲ್ಲಿ ಆಹಾರದ ಕೊರತೆ ಕಾಣಿಸಿಕೊಳ್ಳಲಿದೆ ಎಂದು ಭಾರತೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

students stuck
ಭಾರತೀಯರ ಪರದಾಟ
author img

By

Published : Feb 26, 2022, 3:25 PM IST

Updated : Feb 26, 2022, 6:00 PM IST

ಕೀವ್ ​: ಉಕ್ರೇನ್ ಮೇಲೆ ರಷ್ಯಾ ಸೇನಾ ಪಡೆಗಳು ಕ್ಷಿಪಣಿ, ಬಾಂಬ್​ ದಾಳಿ ಮುಂದುವರಿಸಿವೆ. ಅಲ್ಲಿರುವ ಭಾರತೀಯರು ರೊಮೇನಿಯಾ ಗಡಿಯತ್ತ ತೆರಳಿದ್ದಾರೆ. ಆದರೆ, ಭಾರತೀಯರಿಗೆ ರೊಮೇನಿಯಾ ಗಡಿ ಪ್ರವೇಶಕ್ಕೆ ಅಲ್ಲಿನ ಭದ್ರತಾಧಿಕಾರಿಗಳು ಅವಕಾಶ ಮಾಡಿಕೊಡುತ್ತಿಲ್ಲ. ಯುರೋಪಿಯನ್ನರಿಗೆ ಮಾತ್ರ ಗಡಿ ಪ್ರವೇಶಕ್ಕೆ ಅನುಮತಿಸಿದ್ದು, ಅಲ್ಲಿನ ಅಧಿಕಾರಿಗಳ ಕ್ರಮದಿಂದ ಭಾರತೀಯರು ರೊಮೇನಿಯಾ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ರೊಮೇನಿಯಾ ಗಡಿಯಲ್ಲಿ ಸಿಲುಕಿದ ಭಾರತೀಯರು

ಈ ಬಗ್ಗೆ ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ವಿದ್ಯಾರ್ಥಿಗಳು ಸಂಪರ್ಕಿಸಿದಾಗ, ರೊಮೇನಿಯಾ ಗಡಿಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಅಲ್ಲದೇ, ಸದ್ಯಕ್ಕೆ ಭಾರತೀಯರ ಸ್ಥಳಾಂತರಕ್ಕೆ ಯಾವುದೇ ಮಾರ್ಗಗಳಿಲ್ಲ ಎಂದು ಹೇಳಿದ್ದು, ಅಲ್ಲಿನ ಭಾರತೀಯರನ್ನು ಕಂಗೆಡಿಸಿದೆ.

ಆಶ್ರಯ ತಾಣಗಳಲ್ಲಿ ಗೊಂದಲ : ಊಟ, ನೀರಿನ ಕೊರತೆಯಿಂದ ಕಂಗಾಲಾಗಿರುವ ಭಾರತೀಯರು ಆದಷ್ಟು ಬೇಗ ತಮ್ಮನ್ನು ಇಲ್ಲಿಂದ ತೆರವು ಮಾಡಬೇಕು. ತಾವು ತಂಗಿರುವ ಪ್ರದೇಶದ ಸುತ್ತಲೂ ರಷ್ಯಾದ ಬಾಂಬ್​ಗಳು ಸ್ಫೋಟಗೊಳ್ಳುತ್ತಿವೆ. ಇಲ್ಲಿ ನೀಡಲಾಗುತ್ತಿರುವ ಊಟವೂ ಕೂಡ ಸಾಲದಾಗಿದೆ. ಇನ್ನೆರಡು ದಿನಗಳಲ್ಲಿ ಆಹಾರದ ಕೊರತೆ ಕಾಣಿಸಿಕೊಳ್ಳಲಿದೆ ಎಂದು ಭಾರತೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ದೂತಾವಾಸದ ವಿರುದ್ಧ ಭಾರತೀಯರ ಆಕ್ರೋಶ

ಧೂತಾವಾಸ ಅಧಿಕಾರಿಗಳು ನಿರುತ್ತರ : ತಮ್ಮನ್ನು ಇಲ್ಲಿಂದ ತೆರವು ಮಾಡುವ ಬಗ್ಗೆ ಉಕ್ರೇನ್​ ಧೂತಾವಾಸ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ಸದ್ಯಕ್ಕೆ ಎಲ್ಲರ ಸ್ಥಳಾಂತರ ಮಾಡುವುದು ಕಷ್ಟವಾಗಿದೆ. ಎಲ್ಲರೂ ತಾವಿರುವ ಸ್ಥಳದಲ್ಲೇ ಶಾಂತವಾಗಿರಲು ಸೂಚಿಸಿದ್ದಾರೆ. ವಿಮಾನಗಳ ಕೊರತೆ ಮತ್ತು ಪ್ರತಿಕೂಲ ಪರಿಸ್ಥಿತಿ ಕಾರಣ ಎಲ್ಲರನ್ನೂ ಏಕಕಾಲಕ್ಕೆ ಸ್ಥಳಾಂತರ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ದಯವಿಟ್ಟು ತಂಗಿದ ಸ್ಥಳದಲ್ಲೇ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರೊಮೇನಿಯಾ ಗಡಿಯಲ್ಲಿ ಭಾರತೀಯರ ಸಾಲು : ಇನ್ನು ರಷ್ಯಾದ ದಾಳಿಯ ಭೀತಿಯಿಂದ ಜೀವ ಉಳಿಸಿಕೊಳ್ಳಲು ಉಕ್ರೇನ್​ನಿಂದ ರೊಮೇನಿಯಾ ಗಡಿಗೆ ಹೇಗೋ ಬಂದ ಭಾರತೀಯರಿಗೆ ರೊಮೇನಿಯಾ ಗಡಿ ಭದ್ರತಾಧಿಕಾರಿಗಳು ಗಡಿಯಲ್ಲೇ ತಡೆದು ನಿಲ್ಲಿಸಿದ್ದಾರೆ.

ರೊಮೇನಿಯಾ ಗಡಿಯಲ್ಲಿ ಸಿಲುಕಿದ ಭಾರತೀಯರು
ರೊಮೇನಿಯಾ ಗಡಿಯಲ್ಲಿ ಸಿಲುಕಿದ ಭಾರತೀಯರು

ಯಾವುದೇ ದಾಖಲೆಗಳು ಮತ್ತು ರಾಯಭಾರಿ ಕಚೇರಿಯ ಸೂಚನೆ ಇಲ್ಲದೇ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗಲ್ಲ ಎಂದು ಗಡಿಯಲ್ಲೇ ಎಲ್ಲರನ್ನೂ ತಡೆಯಲಾಗಿದೆ. ಇದು ಭಾರತೀಯರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಅಲ್ಲದೇ ಭಾರತೀಯ ದೂತಾವಾಸ ಅಧಿಕಾರಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇನ್ನು ದೂತಾವಾಸ ಅಧಿಕಾರಿಗಳ ವಿರುದ್ಧ ಭಾರತೀಯ ವಿದ್ಯಾರ್ಥಿನಿಯೊಬ್ಬರು ವಿಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮನ್ನು ಇಲ್ಲಿಂದ ರಕ್ಷಣೆ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. 10 ಜನಕ್ಕೆ ಸೇರಿ ಒಂದು ಊಟ ನೀಡಲಾಗುತ್ತಿದೆ. ಅದನ್ನು ನಾವು ಹೇಗೋ ನಿಭಾಯಿಸುತ್ತೇವೆ. ಮೊದಲು ನಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಅಂಗಲಾಚಿದ್ದಾರೆ.

ಓದಿ: ರಷ್ಯಾದ 2,800 ಸೈನಿಕರು ಬಲಿ-ಉಕ್ರೇನ್ ರಕ್ಷಣಾ ಸಚಿವಾಲಯ

Last Updated : Feb 26, 2022, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.