ETV Bharat / international

ಭಾರತದ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆ: WHO - Covid Variant

ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೋವಿಡ್ ವೈರಸ್​ ಜಗತ್ತಿನಾದ್ಯಂತ ಹಬ್ಬಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

Indian Covid Variant Found In 44 Countries: WHO
ಭಾರತದ ರೂಪಾಂತರಿ ವೈರಸ್
author img

By

Published : May 12, 2021, 2:15 PM IST

ಜಿನೀವಾ (ಸ್ವಿಟ್ಜರ್​​ಲ್ಯಾಂಡ್): ಭಾರತದಲ್ಲಿ ಪತ್ತೆಯಾದ ಕೋವಿಡ್ ರೂಪಾಂತರಿ ವೈರಸ್ ಹಲವು ದೇಶಗಳಲ್ಲಿ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೋವಿಡ್-19 ಬಿ.1.617 ರೂಪಾಂತರಿಯು, ವಿಶ್ವದಾದ್ಯಂತ ಸುಮಾರು 4,500 ಜನರಲ್ಲಿ ಕಂಡು ಬಂದಿದೆ ಎಂದು ಡಬ್ಲ್ಯುಹೆಚ್​ಒಗೆ ಒಳಪಡುವ 44 ದೇಶಗಳು ಓಪನ್ ಆಕ್ಸೆಸ್​ ಡೇಟಾ ಬೇಸ್​ನಲ್ಲಿ ಅಪ್ಲೋಡ್​ ಮಾಡಿದ ಮಾಹಿತಿಯಿಂದ ತಿಳಿದು ಬಂದಿದೆ.

ಇದರೊಂದಿಗೆ ಇನ್ನೂ ಐದು ದೇಶಗಳಲ್ಲಿ ರೂಪಾಂತರಿ ಪತ್ತೆಯಾದ ಬಗ್ಗೆ ಡಬ್ಲ್ಯುಹೆಚ್​ಒಗೆ ಮಾಹಿತಿ ಸಿಕ್ಕಿದ್ದು, ವಾರ ಕಳೆದಂತೆ ಈ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದೆ. ಭಾರತದ ಹೊರಗೆ ಬ್ರಿಟನ್​ನಲ್ಲಿ ಈ ರೂಪಾಂತರಿ ವೈರಸ್ ಹೆಚ್ಚಾಗಿ ಕಂಡು ಬಂದಿದೆ. ಬಿ.1.617 ರೂಪಾಂತರಿ ವೈರಸ್ ಮೂರು ವಿಭಿನ್ನ ಉಪ-ವಂಶಾವಳಿಗಳಿಂದ ಸ್ವಲ್ಪ ಭಿನ್ನವಾದ ರೂಪಾಂತರಗಳು ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಕಳೆದ ವಾರ ಡಬ್ಲ್ಯುಹೆಚ್​ಒ ಹೇಳಿತ್ತು.

ಈ ರೂಪಾಂತರಿ ವೈರಸ್ ಭಾರತದ ಹೊರಗೆ ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದೆ. ರೂಪಾಂತರಿ ವೈರಸ್ ಮೂಲ ವೈರಸ್​ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಅವುಗಳು ಹೆಚ್ಚು ಹರಡುತ್ತದೆ ಮತ್ತು ಲಸಿಕೆಯ ರಕ್ಷಣಾ ಗೋಡೆಯನ್ನೂ ದಾಟುವ ಸಾಮರ್ಥ್ಯ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.