ETV Bharat / international

ಮತದಾನದಿಂದ ಮತ್ತೆ ದೂರ ಉಳಿದ ಭಾರತ.. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ 141 ಮತ - ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಒತ್ತಾಯ

ಉಕ್ರೇನ್​ ಮೇಲೆ ಯುದ್ಧ ಸಾರಿ ಭೀಕರತೆ ಸೃಷ್ಟಿಸಿರುವ ರಷ್ಯಾದ ವಿರುದ್ಧ ವಿಶ್ವಸಮುದಾಯ ಒಂದಾಗುತ್ತಿದೆ. ನಿನ್ನೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 141 ಮತಗಳು ರಷ್ಯಾ ನಿರ್ಣಯದ ವಿರುದ್ಧ ಚಲಾವಣೆಯಾದವು. ಭಾರತ ಮತದಾನದಿಂದ ದೂರ ಉಳಿದಿತ್ತು.

india-abstains
ಉಳಿದ ಭಾರತ
author img

By

Published : Mar 3, 2022, 7:03 AM IST

ನ್ಯೂಯಾರ್ಕ್​: ಉಕ್ರೇನ್​ ಮೇಲೆ ಯುದ್ಧ ಸಾರಿ ಭೀಕರತೆ ಸೃಷ್ಟಿಸಿರುವ ರಷ್ಯಾದ ವಿರುದ್ಧ ವಿಶ್ವಸಮುದಾಯ ಒಂದಾಗುತ್ತಿದೆ. ನಿನ್ನೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 141 ಮತಗಳು ರಷ್ಯಾ ನಿರ್ಣಯದ ವಿರುದ್ಧ ಚಲಾವಣೆಯಾದವು. ಭಾರತ ಮತದಾನದಿಂದ ದೂರ ಉಳಿದಿತ್ತು.

ರಷ್ಯಾದ ಪರವಾಗಿ 5 ಮತಗಳು ಬಿದ್ದರೆ, ವಿರುದ್ಧವಾಗಿ 141 ಮತಗಳು ಚಲಾವಣೆಯಾದವು. ಇದು ಅತ್ಯಧಿಕ ಪ್ರಮಾಣದಲ್ಲಾದ ವಿರೋಧವಾಗಿದೆ. ಇದು ರಷ್ಯಾದ ಮೇಲೆ ರಾಜತಾಂತ್ರಿಕ ಒತ್ತಡ ಉಂಟು ಮಾಡಿದೆ. ಇದರಲ್ಲಿ ಭಾರತ ಯಾರ ಪರವೂ ಮತದಾನ ಮಾಡದೇ ತಟಸ್ಥವಾಗಿದೆ. ಇನ್ನು 35 ದೇಶಗಳು ಮತದಾನದಿಂದ ದೂರ ಉಳಿದಿದ್ದವು. 12 ದೇಶಗಳು ಗೈರಾಗಿದ್ದವು.

ಉಕ್ರೇನ್​ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ತಕ್ಷಣದ ಕದನ ವಿರಾಮಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯ ನೀಡಿದ ಕರೆಯನ್ನು ಭಾರತ ಬೆಂಬಲಿಸಲಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ರಷ್ಯಾ ಮತ್ತು ಉಕ್ರೇನ್​ ದೇಶಗಳು ತಮ್ಮಲ್ಲಿನ ಸಮಸ್ಯೆ ಬರಗೆಹರಿಸಿಕೊಳ್ಳಬಹುದು ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್​. ತಿರುಮೂರ್ತಿ ಹೇಳಿದ್ದಾರೆ.

ಇನ್ನು ಈ ಹಿಂದೆ ನಡೆದ ಭದ್ರತಾ ಮಂಡಳಿಯ ಸಭೆಯಲ್ಲೂ ಕೂಡ ಭಾರತ 3 ಬಾರಿ ಮತದಾನದಿಂದ ದೂರ ಉಳಿದಿತ್ತು. ಇದೀಗ ಸಾಮಾನ್ಯ ಸಭೆಯಲ್ಲೂ ಮತದಾನ ಮಾಡಿಲ್ಲ. ಉಕ್ರೇನ್​ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸುವ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತಕ್ಕೆ ಹಾಕಲಾಯಿತು. ಇದು ಒಂದು ದೇಶದ ವಿರುದ್ಧ ವಿಶ್ವ ಸಮುದಾಯ ಹೊಂದಿರುವ ಭಾವನೆಯನ್ನು ಸೂಚಿಸುತ್ತದೆ. ಈ ಹಿಂದೆ ರಷ್ಯಾವು ಕ್ರೈಮಿಯಾವನ್ನು ವಶಪಡಿಸಿಕೊಂಡಾಗಲೂ 100 ಕ್ಕೂ ಅಧಿಕ ರಾಷ್ಟ್ರಗಳು ಮತದಾನ ಮಾಡಿ ಖಂಡಿಸಿದ್ದರು.

ಓದಿ: ಉಕ್ರೇನ್​ನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ವೆಬ್​ಸೈಟ್​ ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.