ಝಾದರ್(ಕ್ರೊಯೇಷಿಯಾ): ವಿಶ್ವದ 19ನೇ ರ‍್ಯಾಂಕ್‌ನ ಟೆನಿಸ್ ಆಟಗಾರ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಡ್ರಿಯಾ ಟೂರ್ನಲ್ಲಿ ಪಾಲ್ಗೊಂಡಿದ್ದ ವೇಳೆ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
- " class="align-text-top noRightClick twitterSection" data="
">
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಡಿಮಿಟ್ರೋವ್ ''ನನ್ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ವೇಳೆ ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ನನ್ನಿಂದ ನಿಮಗೇನಾದರೂ ಹಾನಿಯಾಗಿದ್ದರೆ ಕ್ಷಮಿಸಿ. ನಾನು ಮನೆಗೆ ಬಂದು ಈಗ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ.. ಎಲ್ಲರ ಬೆಂಬಲಕ್ಕೆ ಚಿರಋಣಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ'' ಎಂದು ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗ್ರಾಂಡ್ಸ್ಲ್ಯಾಮ್ ಸೆಮಿಫೈನಲ್ ಆಟಗಾರನಾಗಿರುವ ಡಿಮಿಟ್ರೋವ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಟೆನಿಸ್ ಪಂದ್ಯಗಳನ್ನು ಮಾರ್ಚ್ನಲ್ಲಿ ಅಂತ್ಯಗೊಳಿಸಲಾಗಿತ್ತು. ಆ ಪಂದ್ಯಗಳನ್ನು ಆಗಸ್ಟ್ನಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.