ಉಕ್ರೇನ್: ವ್ಯಾಲೆಂಟಿನಾ ಕಾನ್ಸ್ಟಾಂಟಿನೋವ್ಸ್ಕಾ ಎಂಬ ಉಕ್ರೇನಿಯನ್ ಅಜ್ಜಿ ಈ ಇಳಿ ವಯುಸ್ಸಲ್ಲೂ ಉಕ್ರೇನ್‌ನಲ್ಲಿ ನಾಗರಿಕ ಯುದ್ಧ ತರಬೇತಿಯಲ್ಲಿ ಭಾಗವಹಿಸಿ AK-47 ರೈಫಲ್ ಅನ್ನು ಹಿಡಿದುಕೊಂಡು ಅದನ್ನು ಹೇಗೆ ಬಳಸಬೇಕೆಂದು ಕಲಿಯುತ್ತಿದ್ದಾರೆ.
ಪೂರ್ವ ಉಕ್ರೇನ್‌ನ ಮರಿಯುಪೋಲ್‌ನಲ್ಲಿನ ತರಬೇತಿ ಕಾರ್ಯಾಗಾರದಲ್ಲಿ ಈ 79 ವರ್ಷದ ಅಜ್ಜಿ ಭಾಗಿಯಾಗಿದ್ದಾರೆ. ಗಾರ್ಡ್ ಒಬ್ಬರು ಈ ವೇಳೆ ಆಕ್ರಮಣಕಾರಿ ರೈಫಲ್ ಅನ್ನು ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಏನಾದರೂ ಸಂಭವಿಸಿದರೆ ನಾನು ಶೂಟ್ ಮಾಡಲು ಸಿದ್ಧಳಿದ್ದೇನೆ. ನಾನು ನನ್ನ ಮನೆ, ನನ್ನ ನಗರ, ನನ್ನ ಮಕ್ಕಳನ್ನು ರಕ್ಷಿಸುತ್ತೇನೆ. ನಾನು ನನ್ನ ದೇಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎನ್ನುವ ಛಲದ ಮಾತುಗಳನ್ನು ಈ ಇಳಿವಯಸ್ಸಲ್ಲೂ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್ನಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ: ಭಾರತ ಕಳವಳ
ಗಡಿಯಲ್ಲಿ ರಷ್ಯಾದ ಪಡೆಗಳೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ಮಿಲಿಟರಿ ತಂತ್ರಗಳನ್ನು ಕಲಿಸುವ ಗುರಿಯನ್ನು ಈ ತರಬೇತಿ ಹೊಂದಿದೆ. ರಾಗ್-ಟ್ಯಾಗ್ ಸೈನ್ಯವನ್ನು ನಿರ್ಮಿಸಲು ದೇಶಾದ್ಯಂತ ನಡೆಸಲಾದ ಹಲವಾರು ಕಸರತ್ತುಗಳಲ್ಲಿ ಇದು ಒಂದಾಗಿದೆ.
ಎಂಟು ವರ್ಷಗಳಿಂದ ಸಂಘರ್ಷದಲ್ಲಿರುವ ನಗರಕ್ಕೆ ಮೊದಲ ಬಾರಿಗೆ ಸುರಕ್ಷತೆ ಮತ್ತು ತರಬೇತಿ ನೀಡಲಾಗಿದೆ. ರಷ್ಯಾ ಉಕ್ರೇನ್ ಗಡಿಯಲ್ಲಿ ಪಡೆಗಳನ್ನು ನಿರ್ಮಿಸುತ್ತಿದೆ ಮತ್ತು ಬೆಲಾರಸ್‌ನೊಂದಿಗೆ ಮಿಲಿಟರಿ ಸಮರಭ್ಯಾಸ ನಡೆಸುತ್ತಿದೆ.