ಲಂಡನ್: ರಾಜಾಡಳಿತವನ್ನು ತ್ಯಜಿಸಿ ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್ನ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಮಾರ್ಕೆಲ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹೌದು, ರಾಜಮನೆತನದ ಜವಾಬ್ದಾರಿಯಿಂದ ದೂರವಾಗಿದ್ದ ಇವರು ಇದೀಗ ಹೇಳಿಕೊಳ್ಳದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ರಾವಣನನ್ನು ದೇವ ಶ್ರೀರಾಮ, ಸೀತೆ ಸೋಲಿಸಿದಂತೆ ಕೊರೊನಾ ಅಳಿಯಲಿ: ವಿಶ್ವಕ್ಕೆ ಬ್ರಿಟನ್ ಪ್ರಧಾನಿಯ ದೀಪಾವಳಿ ಸಂದೇಶ
ಕಳೆದ ಜುಲೈನಲ್ಲಿ ಡಚೆಸ್ ಆಫ್ ಸಸೆಕ್ಸ್ ಮೇಘನ್ ಮಾರ್ಕೆಲ್ಗೆ ಗರ್ಭಪಾತವಾಗಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಈ ದಂಪತಿಗೆ ಈ ಘಟನೆ ನಿರಾಸೆ ತಂದಿದೆ ಎಂಬ ವರದಿ ಬಂದಿದೆ. ಗರ್ಭಪಾತದ ನೋವು ತೋಡಿಕೊಂಡಿರುವ ಮೇಘನ್ ಮಾರ್ಕೆಲ್, ಭಾವಾನಾತ್ಮಕವಾಗಿ ಪತ್ರ ಬರೆದು ತಮ್ಮ ನೋವು ಹೊರಹಾಕಿದ್ದಾರೆ. ಈಗಾಗಲೇ ಆರ್ಚಿ ಎಂಬ ಗಂಡು ಮಗುವನ್ನು ಹೊಂದಿದ್ದು, ಇವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು.
ನನ್ನ ಮೊದಲನೆಯ ಮಗುವನ್ನು ನಾನು ಅಪ್ಪಿಕೊಂಡಿದ್ದರಿಂದ ನಾನು ನನ್ನ ಎರಡನೆ ಮಗುವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನನಗೆ ತಿಳಿಯಿತು. ಆದರೂ ಸಾಮಾನ್ಯರಂತೆ ಬದುಕಲು ನಾನು ನನ್ನ ನೋವಿನ ಕಥೆಯನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಮಗುವನ್ನು ಕಳೆದುಕೊಳ್ಳುವುದು ಜಗತ್ತಿನಲ್ಲಿ ತುಂಬಾಲಾರದ ನಷ್ಟ. ಅನೇಕರು ಈ ನೋವು ಅನುಭವಿಸಿದರೂ ಸಹಜವಾಗಿದ್ದಾರೆ. ಅವರಂತೆ ನಾನು ಆಗಲು ಇಷ್ಟಪಡುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಬ್ರಿಟನ್ನಲ್ಲೂ ತೀವ್ರಗೊಂಡ ಪ್ರತಿಭಟನೆ ಕಾವು : ಸಾಮ್ರಾಜ್ಯಶಾಹಿ ಪ್ರತಿಮೆ ತೆರವಿಗೆ ಆಗ್ರಹ
ಮಗ ಆರ್ಚಿಗೆ ಡೈಪರ್ ಬದಲಾಯಿಸುತ್ತಿದ್ದಾಗ ನನ್ನಲ್ಲಿ ಯಾವುದೋ ನೋವು ಕಾಣಿಸಿಕೊಂಡಿತು. ಈ ವೇಳೆ, ನನ್ನ ನೆಲಕ್ಕೆ ಬಿದ್ದ ಆರ್ಚಿಯನ್ನು ಅಪ್ಪಿಕೊಂಡು ಹಾಡು ಹಾಡಲಾರಂಭಿಸಿದೆ. ನೋವು ನನ್ನನ್ನು ಸಮಾಧಾನಪಡಿಸಲಿಲ್ಲ. ನೋವು ಹೆಚ್ಚಾಯಿತು ಎಂದು ಗೊತ್ತಾಗುತ್ತಿದ್ದಂತೆ ನಾನು ಆಸ್ಪತ್ರೆಯಲ್ಲಿದ್ದೆ. ಈ ವೇಳೆ, ನನ್ನ ಎರಡನೇ ಮಗುವನ್ನು ಕಳೆದುಕೊಳ್ಳುತ್ತಿರುವುದು ನನಗೆ ಮನವರಿಕೆ ಆಯಿತು. ಇದಾದ ಬಳಿಕ ನಾನು ಆಸ್ಪತ್ರೆಯ ಹಾಸಿಗೆ ಮೇಲೆ ಕಣ್ಣು ಬಿಟ್ಟೆ. ಕಣ್ಣು ತೆರೆಯುತ್ತಿದ್ದಂತೆ ಗಂಡನ ಕೈ ಹಿಡಿದು ಮುತ್ತಿಟ್ಟೆ. ಕಣ್ಣು ತೇವಗೊಂಡವು. ಈ ಘಟನೆ ಬಳಿಕ ನಾನು ಮತ್ತು ಹ್ಯಾರಿ ಹೇಗೆ ಹೊರಬರುತ್ತೇವೆ ಎಂಬುದು ಗೊತ್ತಿರಲಿಲ್ಲ. ಈ ನೋವಿನನ್ನು ಹೇಗೆ ಮರೆಯಲು ಪ್ರಯತ್ನಿಸಿದೆ ಎಂಬುದು ನಾನು ಈಗ ಊಹಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.