ಮಾಸ್ಕೋ: ಭಾರತ-ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ನಡುವೆ ಇಂದು ಮಾಸ್ಕೋದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಅವರ ನಡುವೆ ಮಹತ್ವದ ಮಾತುಕತೆ ನಡೆಯಿತು.
-
Defence Minister Rajnath Singh meeting the Chinese Defence Minister, General Fenghe in Moscow, Russia: Office of the Defence Minister pic.twitter.com/znmbUrsKtj
— ANI (@ANI) September 4, 2020 " class="align-text-top noRightClick twitterSection" data="
">Defence Minister Rajnath Singh meeting the Chinese Defence Minister, General Fenghe in Moscow, Russia: Office of the Defence Minister pic.twitter.com/znmbUrsKtj
— ANI (@ANI) September 4, 2020Defence Minister Rajnath Singh meeting the Chinese Defence Minister, General Fenghe in Moscow, Russia: Office of the Defence Minister pic.twitter.com/znmbUrsKtj
— ANI (@ANI) September 4, 2020
ಶಾಂಘೈ ಸಹಕಾರ ಸಂಸ್ಥೆಯ(ಎಸ್ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಉಭಯ ದೇಶಗಳ ರಕ್ಷಣಾ ಸಚಿವರು ಮಾಸ್ಕೋಗೆ ತೆರಳಿದ್ದು, ಈ ವೇಳೆ ಮಹತ್ವದ ಮಾತುಕತೆ ನಡೆದಿದೆ. ಭಾರತದ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಬೇಕೆಂದು ಚೀನಾದ ರಕ್ಷಣಾ ಸಚಿವರು ಮನವಿ ಮಾಡಿಕೊಂಡಿದ್ದಾಗಿ ತಿಳಿದು ಬಂದಿತ್ತು. ಹೀಗಾಗಿ ಉಭಯ ಸಚಿವರ ನಡುವೆ ಈ ಸಭೆ ನಡೆದಿದೆ.
ಉಭಯ ದೇಶದ ನಾಯಕರ ನಡುವೆ ಯಾವೆಲ್ಲ ಮಾತುಕತೆ ನಡೆದಿದೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಬಹಿರಂಗಗೊಂಡಿಲ್ಲ. ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಜೂನ್ 16ರಂದು ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಟ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಇದಾದ ಬಳಿಕ ಉಭಯ ದೇಶದ ಮಿಲಿಟರಿ ಅಧಿಕಾರಿಗಳ ನಡುವೆ ಅನೇಕ ಸುತ್ತಿನ ಮಹತ್ವದ ಮಾತುಕತೆ ನಡೆದಿತ್ತು.