ETV Bharat / international

ಐಟಿ ರಿಟರ್ನ್ಸ್​, ಲಾಭ ಪಾವತಿ, ಕಂಪನಿಗಳ ಟ್ಯಾಕ್ಸ್​ ಸಲ್ಲಿಕೆ ಗಡುವು ಮುಂದೂಡಿಕೆ: ಇವೇ ಕಡೇ ದಿನಗಳು - Company tax fillings deadline

2020ನೇ ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ಸ್ ನೀಡುವ ದಿನಾಂಕವನ್ನು 2020ಡಿಸೆಂಬರ್ 31ರಿಂದ 2021 ಜನವರಿ 10ಕ್ಕೆ ವಿಸ್ತರಿಸಲಾಗಿದೆ. ಕಂಪನಿಗಳು 2019-20ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು 15 ದಿನಗಳವರೆಗೆ ಅಂದರೆ, 2021ರ ಫೆಬ್ರವರಿ 15ಕ್ಕೆ ವಿಸ್ತರಿಸಲಾಗಿದೆ.

Tax
ತೆರಿಗೆ
author img

By

Published : Dec 30, 2020, 7:35 PM IST

ನವದೆಹಲಿ: ಕೊರೊನಾ ವೈರಸ್​ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹಣಕಾಸು ಸಚಿವಾಲಯ ಬುಧವಾರ ವಿವಿಧ ತೆರಿಗೆ ಪಾವತಿ ಗಡುವನ್ನು ವಿಸ್ತರಿಸುವುದಾಗಿ ತಿಳಿಸಿದೆ.

2019-20ರ ಹಣಕಾಸು ವರ್ಷಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಅಡಿ ವಾರ್ಷಿಕ ಲಾಭ ಪಾವತಿಯ ದಿನಾಂಕವನ್ನು 2021ರ ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

2020 ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ನೀಡುವ ದಿನಾಂಕವನ್ನು 2020 ಡಿಸೆಂಬರ್ 31ರಿಂದ 2021 ಜನವರಿ 10ಕ್ಕೆ ವಿಸ್ತರಿಸಲಾಗಿದೆ. ಕಂಪನಿಗಳು 2019-20ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು 15 ದಿನಗಳವರೆಗೆ ಅಂದರೆ, 2021ರ ಫೆಬ್ರವರಿ 15ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಕೃಷಿ ಕಾಯ್ದೆ ಹಿಂದಕ್ಕೆ ಪಡೆದು ರೈತರಿಗೆ ಹೊಸ ವರ್ಷದ ಉಡುಗೊರೆ ನೀಡಿ; ಕಾಂಗ್ರೆಸ್‌ ಒತ್ತಾಯ

ಕೋವಿಡ್ -19 ಸೋಂಕಿನ ಕಾರಣ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಂಡು, ಸರ್ಕಾರವು ವಿವಿಧ ಪಾವತಿ ದಿನಾಂಕಗಳನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ಐಟಿ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಪಡೆಯಬೇಕಾದ ತೆರಿಗೆದಾರರಿಗೆ (ಪಾಲುದಾರರು ಒಳಗೊಂಡು) 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್​ಗೆ ಅಂತಿಮ ದಿನಾಂಕ 2021ರ ಫೆಬ್ರವರಿ 15ಕ್ಕೆ ವಿಸ್ತರಿಸಲಾಗಿದೆ.

ವಿವಾದ್​ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆಯ ಕೊನೆಯ ದಿನಾಂಕ 2020ರ ಡಿಸೆಂಬರ್ 31ರಿಂದ 2021ರ ಜನವರಿ 31ಕ್ಕೆ ಗಡುವು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.