ಜಿನೀವಾ: ಸದ್ಯಕ್ಕೆ ಕೊರೊನಾ ಸೋಂಕಿನ ಪ್ರಭಾವ ಮುಗಿಯುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿರುವ ವೀಶ್ವ ಆರೋಗ್ಯ ಸಂಸ್ಥೆ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್, ಆಫ್ರಿಕಾ, ಪೂರ್ವ ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಕೆಲವು ಏಷ್ಯಾ ದೇಶಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಸಾಮರ್ಥ್ಯ ಕಡಿಮೆ ಇರುವ ಕಾರಣ ಈ ಪ್ರದೇಶಗಳ ಅನೇಕ ದೇಶಗಳಲ್ಲಿ ವಾಸ್ತವಿಕ ಸೋಂಕಿತ ಪ್ರಕರಣ ಮತ್ತು ಸಾವುಗಳ ನಿಖರ ವರದಿ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
-
"The pandemic is far from over. WHO continues to be concerned about the increasing trends in Africa, Eastern Europe, Latin America & some Asian countries.
— World Health Organization (WHO) (@WHO) April 27, 2020 " class="align-text-top noRightClick twitterSection" data="
As in all regions, cases & deaths are underreported in countries in these regions because of low testing capacity"-@DrTedros
">"The pandemic is far from over. WHO continues to be concerned about the increasing trends in Africa, Eastern Europe, Latin America & some Asian countries.
— World Health Organization (WHO) (@WHO) April 27, 2020
As in all regions, cases & deaths are underreported in countries in these regions because of low testing capacity"-@DrTedros"The pandemic is far from over. WHO continues to be concerned about the increasing trends in Africa, Eastern Europe, Latin America & some Asian countries.
— World Health Organization (WHO) (@WHO) April 27, 2020
As in all regions, cases & deaths are underreported in countries in these regions because of low testing capacity"-@DrTedros
ನಾವೆಲ್ಲ ಒಂದುಗೂಡದಿದ್ದರೆ ಈ ವೈರಸ್ ಅನ್ನು ಸೋಲಿಸಲಾಗುವುದಿಲ್ಲ. ಒಗ್ಗಟ್ಟು ಪ್ರದರ್ಶಿಸದಿದ್ದರೆ ಈ ವೈರಸ್ ನಮ್ಮ ನಡುವಿನ ಬಿರುಕುಗಳನ್ನು ಬಳಸಿಕೊಂಡು ಮತ್ತಷ್ಟು ಹಾನಿ ಉಂಟುಮಾಡುತ್ತದೆ ಎಂದಿದ್ದಾರೆ.
ಕಳೆದ ವಾರ ಕೂಡ ವಿಶ್ವ ಆರೋಗ್ಯ ಸಂಸ್ಥೆ ಇಂಥದ್ದೇ ಎಚ್ಚರಿಕೆ ನೀಡಿತ್ತು. ಕೋವಿಡ್-19 ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ. ಹಲವು ದೇಶಗಳು ಹೋರಾಟದ ಮೊದಲ ಹಂತದಲ್ಲಿವೆ ಎಂದು ಘೆಬ್ರೆಯೆಸಸ್ ಹೇಳಿದ್ದರು.