ETV Bharat / international

ಮೃತ ಮಹಿಳೆಗೆ ಮತ್ತೆ ಜೀವ... ಮೃತ್ಯುವಿನ ಕದ ತಟ್ಟಿ ಬಂದದ್ದು ಇನ್ನೂ ಅಚ್ಚರಿ..!

ತೀವ್ರ ಲಘುಷ್ಣತೆಯಿಂದ ಮಹಿಳೆವೋರ್ವಳಿಗೆ ಹೃದಯ ಸ್ತಂಭನ (ಉಸಿರಾಟ ಪ್ರಕ್ರಿಯೆ ಸ್ಥಗಿತ) ಆಗಿತ್ತು. ಸುಮಾರು ಆರು ಗಂಟೆಗಳ ಬಳಿಕ ಮತ್ತೆ ಹೃದಯ ತನ್ನ ಬಡಿತದ ಕಾರ್ಯಾಚರಣೆ ಆರಂಭಿಸಿದೆ. ಈ ವೈದ್ಯ ಲೋಕದ ಅಚ್ಚರಿಯ ಘಟನೆ ಲಂಡನ್​ನಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

cardiac arrest
ಹೃದಯ ಸ್ತಂಭನ
author img

By

Published : Dec 6, 2019, 6:54 PM IST

ಲಂಡನ್​: ಮಹಿಳೆವೋರ್ವಳಿಗೆ ಹೃದಯ ಸ್ತಂಭನವಾಗಿ ಹೃದಯ ಬಡಿತ ಸ್ಥಗಿತಗೊಂಡು ಆರು ಗಂಟೆಗಳ ಕಾಲ ಶವವಾಗಿದ್ದಳು. ಅಚ್ಚರಿ ಎಂಬಂತೆ ಆಕೆಗೆ ಮತ್ತೆ ಹೃದಯ ಬಡಿತ ಶುರುವಾದ ಪವಾಡಸದೃಶ್ಯ ಘಟನೆ ಲಂಡನ್​ನಲ್ಲಿ ನಡೆದಿದೆ.

ಆಡ್ರಿ ಸ್ಕೋಮನ್ (34) ಎಂಬ ಬ್ರಿಟಿಷ್​ ಮಹಿಳೆಯೇ ಸಾವಿನ ಮನೆ ಕದ ತಟ್ಟಿ ಬದುಕಿ ಬಂದವರು. ಇದೊಂದು ಅಸಾಧಾರಣ ಪ್ರಕರಣವೆಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಕೋಮನ್​ ಅವರು ನವೆಂಬರ್​ ತಿಂಗಳಲ್ಲಿ ತನ್ನ ಪತಿಯೊಂದಿಗೆ ಸ್ಪ್ಯಾನಿಷ್​​ನ ಪೈರಿನೀಸ್​ನಲ್ಲಿ ಟ್ರೆಕ್ಕಿಂಗ್​​ ಹೋಗಿದ್ದರು. ಈ ವೇಳೆ ಹಿಮದ ಬಿರುಗಾಳಿಗೆ ಸಿಲುಕಿದಾಗ ಅವರಿಗೆ ತೀವ್ರ ಲಘುಷ್ಣತೆ ಉಂಟಾಗಿತ್ತು ಎಂದು ಬಿಬಿಸಿ ವರದಿ ಮಾಡಿದೆ.

ಬಾರ್ಸಿಲೋನಾದಲ್ಲಿ ವಾಸಿಸುವ ಸ್ಕೋಮನ್, ಪೈರಿನೀಸ್‌ನ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಮಾತನಾಡಲು ಮತ್ತು ನಡೆಯಲು ಆಗದಂತಹ ಸ್ಥಿತಿಗೆ ತಲುಪಿ ನಂತರ ಪ್ರಜ್ಞೆ ತಪ್ಪಿದ್ದರು. ಆ ವೇಳೆಯಲ್ಲಿ ತುರ್ತು ಆರೋಗ್ಯ ಸೇವೆ ಲಭಿಸದೆ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಇದನ್ನು ಕಂಡ ಪತಿ ರೋಹನ್, ಅವಳು ಮೃತಪಟ್ಟಿದ್ದಾಳೆ ಎಂದು ನಂಬಿದ್ದ.

ಸುಮಾರು ಎರಡು ಗಂಟೆಗಳ ನಂತರ ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ಬಂದಾಗ ಸ್ಕೋಮನ್ ದೇಹದಲ್ಲಿ ಉಷ್ಣಾಂಶ ಕುಸಿದಿತ್ತು. ತಕ್ಷಣವೇ ಬಾರ್ಸಿಲೋನಾದ ವಾಲ್ ಡಿ ಹೆಬ್ರಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡುವಾಗ ಹುಸಿರಾಟದಂತಹ ಯಾವುದೇ ಪ್ರತಿಕ್ರಿಯೆಗಳು ಕಂಡುಬದಿರಲಿಲ್ಲ. ಆರು ಗಂಟೆಯ ಬಳಿಕ ಏಕಾಏಕಿ ಹೃದಯ ಬಡಿತ ಶುರುವಾಗಿದೆ ಎಂದು ವರದಿಯಾಗಿದೆ.

ಸುಪ್ತಾವಸ್ಥೆಯಲ್ಲಿದ್ದಾಗ ಲಘುಷ್ಣತೆಯು ಅವಳ ದೇಹ ಮತ್ತು ಮೆದುಳನ್ನು ಹದಗೆಡದಂತೆ ರಕ್ಷಿಸಿದೆ. ಇದುವೇ ಅವಳನ್ನು ಸಾವಿನ ಅಂಚಿಗೆ ಕರೆತಂದಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.