ETV Bharat / international

ಉಕ್ರೇನ್​ ಅಣುಸ್ಥಾವರಕ್ಕೆ ಬೆಂಕಿ: ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಬೈಡನ್ ಒತ್ತಾಯ

ಅಣುಸ್ಥಾವರದ ಸಮೀಪ ಸೇನಾ ಕಾರ್ಯಾಚರಣೆ ಸಲ್ಲಿಸುವಂತೆ ಮತ್ತು ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳ ಹಾಗೂ ತುರ್ತು ಪರಿಹಾರ ಕೈಗೊಳ್ಳುವ ತಂಡಗಳಿಗೆ ರಷ್ಯಾ ಅನುಮತಿ ನೀಡಬೇಕೆಂಬ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಒತ್ತಾಯಕ್ಕೆ ಬೈಡನ್ ಧ್ವನಿಗೂಡಿಸಿದರು ಎಂದು ಶ್ವೇತಭವನ ಹೇಳಿದೆ.

nuclear power plant
ಉಕ್ರೇನ್​ ಅಣುಸ್ಥಾವರ
author img

By

Published : Mar 4, 2022, 10:19 AM IST

Updated : Mar 4, 2022, 11:31 AM IST

ವಾಷಿಂಗ್ಟನ್( ಅಮೆರಿಕ)​: ಯುದ್ಧ ಪೀಡಿತ ಉಕ್ರೇನ್​ನಲ್ಲಿ ನಡೆದ ಝಪೋರಿಝಿಯಾ ಅಣುಸ್ಥಾವರದ ಬೆಂಕಿ ಅವಘಡ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಉಕ್ರೇನ್​ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ರಷ್ಯಾಕ್ಕೆ ತನ್ನ ಸೇನಾ ಕಾರ್ಯಾಚರಣೆ ನಿಲ್ಲಿಸಲು ಮತ್ತು ಅಣುಸ್ಥಾವರದಲ್ಲಿ ತುರ್ತು ಪರಿಹಾರಕ್ಕೆ ಅನುವು ಮಾಡಿಕೊಡಬೇಕೆಂದು ಜೋ ಬೈಡನ್ ಒತ್ತಾಯಿಸಿದ್ದಾರೆ.

ಕಳೆದ 9 ದಿನಗಳಿಂದ ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾ ದೇಶವು ಐರೋಪ್​ನಲ್ಲೇ ಅತಿ ದೊಡ್ಡದಾದ ಉಕ್ರೇನ್​ನ ಝಪೋರಿಝಿಯಾ ಅಣುಸ್ಥಾವರದ ಮೇಲೆ ದಾಳಿ ಮಾಡಿದೆ. ಇದರಿಂದ ಅಣುಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಹಾನಿಯಾಗಿ ಭೀಕರ ದುರಂತ ಉಂಟಾಗುವ ಭೀತಿ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬೈಡನ್ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಮಾತುಕತೆ ನಡೆಸಿದರು. ಈ ವೇಳೆ, ಅಣುಸ್ಥಾವರದ ಸಮೀಪ ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಮತ್ತು ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳ ಹಾಗೂ ತುರ್ತು ಪರಿಹಾರ ಕೈಗೊಳ್ಳುವ ತಂಡಗಳಿಗೆ ರಷ್ಯಾ ಅನುಮತಿ ನೀಡಬೇಕೆಂಬ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಒತ್ತಾಯಕ್ಕೆ ಬೈಡನ್ ಧ್ವನಿಗೂಡಿಸಿದರು ಎಂದು ಶ್ವೇತಭವನ ಹೇಳಿದೆ.

ಇದನ್ನೂ ಓದಿ: ಉಕ್ರೇನ್​ - ರಷ್ಯಾ ಪಡೆಗಳ ಭೀಕರ ಕಾಳಗ.. ಹೊತ್ತಿ ಉರಿಯುತ್ತಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ

ಅಲ್ಲದೇ, ಈ ಘಟನೆ ಸಂಬಂಧ ಅಮೆರಿಕದ ಇಂಧನ ಇಲಾಖೆಯ ಪರಮಾಣು ಭದ್ರತೆ ವಿಭಾಗದ ಅಧೀನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಪರಮಾಣು ಭದ್ರತಾ ಆಡಳಿತಾಧಿಕಾರಿ ಅವರೊಂದಿಗೂ ಬೈಡನ್​ ಚರ್ಚಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Last Updated : Mar 4, 2022, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.