ಡಾಲ್ಫಿನ್‌ಗಳು ಸಮುದ್ರದಲ್ಲಿ ನೀರಿನಿಂದ ಮೇಲೆ ಜಿಗಿದು ಪಲ್ಟಿ ಹೊಡೆಯುವುದರ ಮೂಲಕ ತುಂಟಾಟ ಮಾಡೋದನ್ನು ನೋಡಿದ್ದೇವೆ. ಆದ್ರೆ, ಉಕ್ರೇನ್ ಕಪ್ಪು ಸಮುದ್ರ ರೆಸಾರ್ಟ್‌ನಲ್ಲಿರುವ ನೆಮೊ ಡಾಲ್ಫಿನೇರಿಯಂನಲ್ಲಿ ಡಾಲ್ಫಿನ್ ನೀರಿನಿಂದ ಜಿಗಿದು ಬಂದು ಆರು ವರ್ಷದ ಬಾಲಕನ ಕೈಯನ್ನು ಕಚ್ಚಿದೆ. ಕೂಡಲೇ ಬಾಲಕ ಜೋರಾಗಿ ಕಿರುಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬರು ಷೇರ್ ಮಾಡಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋವನ್ನು @odessa_hello ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಡಾಲ್ಫಿನ್ ನೀರಿನಿಂದ ಜಿಗಿದು ಬಂದು ಡಾಲ್ಫಿನ್ ಬಾಲಕ ಕೈ ಕಚ್ಚಿರುವುದರಿಂದ ಕೈಯಲ್ಲಿ ಗಾಯದ ಗುರುತುಗಳು ಕಾಣಿಸಿವೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಡಾಲ್ಫಿನ್‌ಗಳೊಂದಿಗೆ ಆಟವಾಡುವಾಗ ಎಚ್ಚರಿಕೆ ವಹಿಸಬೇಕಿದೆ.
ಡಾಲ್ಫಿನ್‌ನ ತರಬೇತುದಾರ ಲಾಡ್‌ಬಿಬಲ್ ಪ್ರತಿಕ್ರಿಯಿಸಿ, ಬಾಲಕನ ಮೇಲೆ ಆಕ್ರಮಣ ಮಾಡುವ ಉದ್ದೇಶ ಡಾಲ್ಫಿನ್‌ಗೆ ಇರಲಿಲ್ಲ. ಆದರೆ, ಅವನ ಕೈಯಲ್ಲಿ ಏನಾದ್ರೂ ಆಹಾರ ಇರಬಹುದು ಎಂದು ಭಾವಿಸಿ ಡಾಲ್ಫಿನ್ ಸಮೀಪಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಡಾಲ್ಫಿನ್ ಹಸಿದಿಲ್ಲ ಅಥವಾ ಆಕ್ರಮಣಕಾರಿಯೂ ಅಲ್ಲ ಎಂದು ಅಕ್ವೇರಿಯಂನ ಅಧಿಕಾರಿಗಳ ಸ್ಪಷ್ಟಪಡಿಸಿದ್ದಾರೆ.