ETV Bharat / international

"ಇದು ಭರ್ಜರಿ ಜಯ": ಟೆಸ್ಟ್​ ಗೆಲುವಿನ ಬಗ್ಗೆ ವಿಂಡೀಸ್​ ನಾಯಕ ಹೇಳಿದ್ದೇನು? - ಟೆಸ್ಟ್​ ಕ್ರಿಕೆಟ್​

ಮೊದಲ ಟೆಸ್ಟ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ನ್ನು​ ಮಣಿಸಿ ಭರ್ಜರಿ ಜಯ ಗಳಿಸಿದೆ. ಈ ಕುರಿತು ತಂಡದ ನಾಯಕ ಜೇಸನ್​ ಹೋಲ್ಡರ್ ಮಾತನಾಡಿದ್ದು, ಇದು ಭರ್ಜರಿ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಟೆಸ್ಟ್​ ಗೆಲುವಿನ ಕುರಿತು ವಿಂಡೀಸ್​ ನಾಯಕ ಮಾತು

author img

By

Published : Jul 13, 2020, 12:43 PM IST

Updated : Jul 13, 2020, 1:20 PM IST

ಸೌತಾಂಪ್ಟನ್​ (ಇಂಗ್ಲೆಂಡ್​): ಕೊರೊನಾ ಅಬ್ಬರದ ಮಧ್ಯೆಯೇ ವಿಂಡೀಸ್​ ತಂಡ ಇಂಗ್ಲೆಂಡ್​ಗೆ ಪ್ರವಾಸ ಬೆಳೆಸುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಪುನಾರಂಭಗೊಂಡಿದೆ. ಇನ್ನು ಮೊದಲ ಟೆಸ್ಟ್​ನಲ್ಲಿ ವೆಸ್ಟ್​ ಇಂಡೀಸ್​ ಇಂಗ್ಲೆಂಡ್​​​​ ಮಣಿಸಿ ಭರ್ಜರಿ ಜಯ ಗಳಿಸಿದೆ. ಗೆಲುವಿನ ಕುರಿತು ತಂಡದ ನಾಯಕ ಜೇಸನ್​ ಹೋಲ್ಡರ್ ಮಾತನಾಡಿದ್ದಾರೆ. ​

ಇದು ಭರ್ಜರಿ ಜಯ, ಇಂಗ್ಲೆಂಡ್​ ನೆಲದಲ್ಲಿ ಆಡುವುದು ಸುಲಭವಲ್ಲ. ಈ ಹಿಂದೆ 2017ರಲ್ಲಿ ಹೆಡಿಂಗ್ಲೆಯಲ್ಲಿ ನಾವು ಗೆದ್ದಿದ್ದೆವು. ಆದರೆ ಅಂದಿನಿಂದ ಇಲ್ಲಿಯವರಗೆ ಅನೇಕ ವಿಷಯಗಳು ಬದಲಾಗಿವೆ. ನಾವು ಆಡಿದ ರೀತಿ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೋಲ್ಡರ್​ ಹೇಳಿದರು.

ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಶ್ಯಾನ್ನೋನ್​ ಗ್ಯಾಬ್ರಿಲ್​ ಕುರಿತು ಮಾತನಾಡಿ, ಆತ ಆಡಿರುವ ಆಟದಲ್ಲಿ ಆಶ್ಚರ್ಯ ಪಡಬೇಕಾದ ವಿಷಯವಿಲ್ಲ. ಏಕೆಂದರೆ ನನಗೆ ಗೊತ್ತಿದೆ ಆತ ಉತ್ತಮ ಆಟಗಾರರಲ್ಲಿ ಓರ್ವ. ಆತ ಹೃದಯವಂತ ಎಂದು ಹೇಳಿದ್ದಾರೆ.

13 ವರ್ಷಗಳ ಬಳಿಕ ಮೊದಲ ಬಾರಿಗೆ ವಿಂಡೀಸ್ ಸಾಗರೋತ್ತರ ಸರಣಿಯ ಆರಂಭಿಕ ಟೆಸ್ಟ್​ನಲ್ಲಿ ಗೆದ್ದಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೋಲ್ಡರ್, "ನಾವು ಆಡುವ ಪ್ರತಿಯೊಂದು ಆಟವನ್ನು ಗೆಲ್ಲಲು ಬಯಸುತ್ತೇವೆ. ಆದರೆ, ಅದು ಆಗಾಗ ಸಾಧ್ಯವಾಗುವುದಿಲ್ಲ. ಮೈದಾನದಲ್ಲಿ ಹೆಜ್ಜೆ ಹಾಕುವಾಗ ಪ್ರತಿಯೊಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ನಾವು ಈ ಸರಣಿಯನ್ನು ಚೆನ್ನಾಗಿ ಪ್ರಾರಂಭಿಸಿದ್ದೆವು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Last Updated : Jul 13, 2020, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.