ETV Bharat / international

ಯುದ್ಧಪೀಡಿತ ಉಕ್ರೇನ್​​ಗೆ ₹1,768 ಕೋಟಿ ನೆರವು ಘೋಷಿಸಿದ ಬ್ರಿಟನ್​ - ಉಕ್ರೇನ್ ರಷ್ಯಾ ಸಂಘರ್ಷ

ಉಕ್ರೇನ್​ ಮೇಲೆ ರಷ್ಯಾ ಮಿಲಿಟರಿ ಪಡೆ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಅಪಾರ ಪ್ರಮಾಣದ ಸಾವು-ನೋವು ಜೊತೆಗೆ ನಷ್ಟ ಉಂಟಾಗಿದ್ದು, ಅನೇಕ ದೇಶಗಳು ಮಾನವೀಯ ದೃಷ್ಟಿಯಿಂದ ಸಹಾಯಹಸ್ತ ಕೈಚಾಚಿವೆ.

British pm humanitarian aid to Ukraine
British pm humanitarian aid to Ukraine
author img

By

Published : Mar 7, 2022, 9:46 PM IST

ಬ್ರಿಟನ್​: ಯುದ್ಧಪೀಡಿತ ಉಕ್ರೇನ್​​​ಗೆ ಬಹುತೇಕ ಎಲ್ಲ ದೇಶಗಳು ಮಾನವೀಯ ದೃಷ್ಟಿಯಿಂದ ನೆರವು ಮಾಡಲು ಮುಂದಾಗಿದ್ದು, ಇದೀಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 175 ಮಿಲಿಯನ್ ಪೌಂಡ್ ಮಾನವೀಯ ನೆರವು ಘೋಷಿಸಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ರಷ್ಯಾ ಅಧ್ಯಕ್ಷರು ಅತಿದೊಡ್ಡ ತಪ್ಪು ಮಾಡಿದ್ದು, ಅದಕ್ಕೆ ಸೂಕ್ತ ಬೆಲೆ ತೆರಲಿದ್ದಾರೆ ಎಂದಿದ್ದಾರೆ. ಕೆನಡಾ ಪ್ರಧಾನಿ ಕೂಡ ಇದೇ ವೇಳೆ ಮಾತನಾಡಿದ್ದು, ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವ ಅವಶ್ಯಕತೆ ಇದೆ ಎಂದಿದ್ದು, ಸುಮಾರು ಒಂದು ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಸಹಾಯ ನೀಡಲು ಸಿದ್ಧ ಎಂದಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಹೋರಾಟ ಮುಂದುವರೆಯಲಿದ್ದು, ಉಕ್ರೇನ್ ಮೇಲೆ ದಾಳಿ ಮಾಡಿರುವ ಪುಟಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾ ಯುದ್ಧ ಟ್ಯಾಂಕ್‌ ವಶಕ್ಕೆ ಪಡೆದು ಸ್ವದೇಶದ ಬಾವುಟ ಹಾರಿಸಿದ ಉಕ್ರೇನ್ ಪ್ರಜೆ​​: ವಿಡಿಯೋ

ಕಳೆದ 12 ದಿನಗಳಿಂದ ಉಕ್ರೇನ್​-ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್​ನ ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಇದೇ ಕಾರಣಕ್ಕಾಗಿ ಭಾರತ, ಅಮೆರಿಕ, ಜಪಾನ್​, ಫ್ರಾನ್ಸ್​​ ಸೇರಿದಂತೆ ಅನೇಕ ದೇಶಗಳು ಮಾನವೀಯ ದೃಷ್ಟಿಯಿಂದ ನೆರವು ನೀಡುತ್ತಿವೆ. ಭಾರತ ಕೂಡ ಮಹತ್ವದ ಔಷಧಿ ಸೇರಿದಂತೆ ಅಗತ್ಯ ನೆರವು ಈಗಾಗಲೇ ರವಾನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.