ಕೈಯಿವ್ (ಉಕ್ರೇನ್): ಖಾಸಗಿ ನರ್ಸಿಂಗ್ ಹೋಂನಲ್ಲಿ ಅಗ್ನಿ ಅವಘಡ ಸಂಭವಿಸಿ 15 ಜನರು ಸುಟ್ಟು ಕರಕಲಾಗಿದ್ದು, ಐವರು ಗಾಯಗೊಂಡಿರುವ ಘಟನೆ ಉಕ್ರೇನ್ ರಾಜಧಾನಿ ಕೈಯಿವ್ನಲ್ಲಿ ನಡೆದಿದೆ.
ಸ್ಥಳಕ್ಕೆ ದೌಡಾಯಿಸಿದ ರಾಜ್ಯ ತುರ್ತು ಸೇವಾ ಘಟಕದ ಸಿಬ್ಬಂದಿ 9 ಮಂದಿಯನ್ನು ರಕ್ಷಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಮೃತರ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ.
ಇದನ್ನೂ ಓದಿ: ಜಾರ್ಖಂಡ್: ಅಕ್ರಮ ಗಣಿಗಾರಿಕೆ ವೇಳೆ ನಾಲ್ವರ ದುರ್ಮರಣ
ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಆಯೋಗವೊಂದನ್ನು ರಚಿಸುವಂತೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.