ಕೀವ್(ಉಕ್ರೇನ್): ನಮ್ಮ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದಲೂ 11 ಸಾವಿರ ಯೋಧರನ್ನ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಉಕ್ರೇನ್ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, 999 ಶಸ್ತ್ರಸಜ್ಜಿತ ವಾಹನ, 46 ಏರ್ಕ್ರಾಫ್ಟ್, 68 ಹೆಲಿಕಾಪ್ಟರ್, 290 ಯುದ್ಧ ಟ್ಯಾಂಕರ್, 117 ಫಿರಂಗಿ ತುಣುಕು, 50 MLRಗಳನ್ನು ಹೊಡೆದುರುಳಿಸಲಾಗಿದೆ. ಇದರ ಜೊತೆಗೆ 60 ಸಿಸ್ಟರ್ನ್, 454 ವಾಹನ, 3 ಹಡಗು ಮತ್ತು 23 ಯುದ್ಧ ವಿಮಾನ ನಾಶ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದೆ. ಇದರ ಜೊತೆಗೆ 11 ಸಾವಿರ ಯೋಧರನ್ನು ಹೊಡೆದುರುಳಿಸಲಾಗಿದೆಯಂತೆ.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು: 35 ನಿಮಿಷ ಸಮಾಲೋಚನೆ
ಫೆಬ್ರವರಿ 24ರಿಂದಲೂ ಉಕ್ರೇನ್-ರಷ್ಯಾ ನಡುವೆ ಯುದ್ಧ ಆರಂಭಗೊಂಡಿದ್ದು, ಈಗಾಗಲೇ 12 ದಿನಗಳು ಕಳೆದುಹೋಗಿವೆ. ಇದರ ಮಧ್ಯೆ ರಷ್ಯಾ ಮಿಲಿಟರಿ ಪಡೆಗೆ ಉಕ್ರೇನ್ ಕೂಡ ಸೂಕ್ತ ತಿರುಗೇಟು ನೀಡ್ತಿದ್ದು, ಸೋಲು ಒಪ್ಪಿಕೊಂಡಿಲ್ಲ.