ಬ್ಯಾಂಕಾಕ್(ಥಾಯ್ಲೆಂಡ್): ಆನೆಯೊಂದು ತಿಂಡಿಗಾಗಿ ಅಡುಗೆ ಮನೆಯೊಂದರ ಗೋಡೆಯನ್ನು ಒಡೆದು ಒಳಗೆ ನುಗ್ಗಿರುವ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ದಕ್ಷಿಣ ಥಾಯ್ಲೆಂಡ್ನ ಹುವಾ ಹಿನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಟ್ಚಡವನ್ ಪುಯೆಂಗ್ಪ್ರಸೊಪನ್ ಎಂಬುವರ ಅಡುಗೆ ಮನೆಗೆ ಬೂಂಚೆ ಎಂಬ ಹೆಸರಿನ ಆನೆ ನುಗ್ಗಿದ್ದು, ಗೋಡೆಯನ್ನು ಒಡೆದು, ತಲೆಯನ್ನು ತೂರಿಸಿ, ಆಹಾರಕ್ಕಾಗಿ ಹುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.
-
Wild elephant smashes through kitchen wall in search for snacks pic.twitter.com/Xm2grV2sRG
— The Sun (@TheSun) July 11, 2021 " class="align-text-top noRightClick twitterSection" data="
">Wild elephant smashes through kitchen wall in search for snacks pic.twitter.com/Xm2grV2sRG
— The Sun (@TheSun) July 11, 2021Wild elephant smashes through kitchen wall in search for snacks pic.twitter.com/Xm2grV2sRG
— The Sun (@TheSun) July 11, 2021
ಪುಯೆಂಗ್ಪ್ರಸೊಪನ್ ಹೇಳುವಂತೆ, ಈ ಹಿಂದೆಯೂ ಹಲವಾರು ಬಾರಿ ಬುಂಚೆ ಆನೆ ನುಗ್ಗಿದು, ಯಾವುದೇ ಹಾನಿ ಮಾಡಿರಲಿಲ್ಲ. ಆದರೆ ಈ ಬಾರಿ ಸಾಕಷ್ಟು ಹಾನಿ ಮಾಡಿದೆ. ಅಡುಗೆ ಮನೆ ರಿಪೇರಿಗೆ ಸುಮಾರು ಒಂದೂವರೆ ಸಾವಿರ ಡಾಲರ್ ಖರ್ಚಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ನೋಡಿ: ನ್ಯೂಯಾರ್ಕ್‌ನಲ್ಲಿ ಮಧ್ಯಯುಗೀನ ಯುದ್ಧ ಕಂಡು ಜನತೆಗೆ ರೋಮಾಂಚನ
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಿಯಾಂಗ್ ಕ್ರಾಚೆನ್ ನ್ಯಾಷನಲ್ ಪಾರ್ಕ್ನ ಸೂಪರಿಂಟೆಂಡೆಂಟ್ ಸ್ಥಳೀಯ ಮಾರುಕಟ್ಟೆ ನಡೆಯುತ್ತಿರಬೇಕಾದರೆ ಆನೆಗಳು ಆಗಾಗ ಬರುತ್ತವೆ. ಆಹಾರದ ವಾಸನೆ ಅವುಗಳನ್ನು ಮನೆಗಳಿಗೆ ಆಕರ್ಷಿಸುತ್ತವೆ ಎಂದಿದ್ದಾರೆ.