ETV Bharat / international

ಹೆಚ್​​ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯದ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್​ಒ

author img

By

Published : Jul 16, 2021, 8:39 PM IST

ಹೆಚ್​ಐವಿಯೊಂದಿಗೆ ಬದುಕುತ್ತಿರುವ ಕೋವಿಡ್ ಸೋಂಕಿತರು ಆರೋಗ್ಯವಾಗಿರಲು ಆ್ಯಂಟಿ ವೈರಲ್ ಡ್ರಗ್​ಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಿರಬೇಕು. ಹೆಚ್​ಐವಿ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಕಾರಣ ಅವರಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಬೇಕು..

who-warns-that-hiv-infection-increases-risk-of-severe-and-critical-covid-19
ಹೆಚ್​​ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್​ಒ

ಜಿನೇವಾ, ಸ್ವಿಟ್ಜರ್​ಲ್ಯಾಂಡ್ ​: ಸುಮಾರು 37 ರಾಷ್ಟ್ರಗಳ ಕ್ಲಿನಿಕಲ್ ಡೇಟಾ ಸಂಗ್ರಹಣೆ ಮಾಡಿರುವ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಹೆಚ್​ಒ) ಹೆಚ್​ಐವಿ ಸೋಂಕಿತ ವ್ಯಕ್ತಿಗಳಿಗೆ ತಗುಲುವ ಕೋವಿಡ್ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಸಾಮಾನ್ಯ ರೋಗಿಗಳಿಗೆ ಹೋಲಿಸಿದರೆ ಹೆಚ್​ಐವಿ ಸೋಂಕಿನೊಂದಿಗೆ ಬಳಲುತ್ತಿರುವ ರೋಗಿಗಳಲ್ಲಿ ಕೋವಿಡ್ ವೈರಸ್ ಸೋಂಕಿತರಲ್ಲಿ ಅಪಾಯದ ಮಟ್ಟ ಅಥವಾ ಸಾವಿನ ಪ್ರಮಾಣ ಶೇ.30ರಷ್ಟು ಹೆಚ್ಚಿರುತ್ತದೆ. ಹೀಗಾಗಿ, ಮುಂಜಾಗರೂಕತೆ ಅಗತ್ಯ ಎಂದು ಡಬ್ಲ್ಯೂಹೆಚ್​ಒ ಹೇಳಿದೆ.

ಹೆಚ್​ಐವಿಯೊಂದಿಗೆ ಬದುಕುತ್ತಿರುವ ರೋಗಿಗಳಲ್ಲಿ ಸಾಮಾನ್ಯವಾಗಿ ಮಧುಮೇಹ (ಸಕ್ಕರೆ ಕಾಯಿಲೆ) ಮತ್ತು ಅಧಿಕ ರಕ್ತದೊತ್ತಡ(ಬಿಪಿ) ಇರುತ್ತದೆ. ಅದರಲ್ಲೂ 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮರಣದ ಪ್ರಮಾಣ ಹೆಚ್ಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.

ಹೆಚ್​ಐವಿಯೊಂದಿಗೆ ಬದುಕುತ್ತಿರುವ ಕೋವಿಡ್ ಸೋಂಕಿತರು ಆರೋಗ್ಯವಾಗಿರಲು ಆ್ಯಂಟಿ ವೈರಲ್ ಡ್ರಗ್​ಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಿರಬೇಕು. ಹೆಚ್​ಐವಿ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಕಾರಣ ಅವರಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಬೇಕು ಎಂದಿದೆ.

ವಿಶ್ವ ಆರೋಗ್ಯ ಸಂಘಟನೆಯು ನೂರು ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ಇವುಗಳಲ್ಲಿ 40 ರಾಷ್ಟ್ರಗಳು ಹೆಚ್​ಐವಿಯೊಂದಿಗೆ ಬದುಕುತ್ತಿರುವರಿಗೆ ವ್ಯಾಕ್ಸಿನೇಷನ್ ನೀಡಲು ಆದ್ಯತೆ ನೀಡಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಬಿಎಸ್​ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.