ಜಕಾರ್ತ (ಇಂಡೋನೇಷ್ಯಾ): ಪ್ರಚಂಡ ಜ್ವಾಲಾಮುಖಿಗೆ ಇಂಡೋನೇಷ್ಯಾ ತತ್ತರಿಸಿದ್ದು, ಈವರೆಗೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕರು ತೀವ್ರವಾಗಿ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ.
-
Stay safe yg di lereng semeru dan skitarnya🙏🙏 pic.twitter.com/AXJRwPyR6U
— Supereja (@Guaavaaa) December 4, 2021 " class="align-text-top noRightClick twitterSection" data="
">Stay safe yg di lereng semeru dan skitarnya🙏🙏 pic.twitter.com/AXJRwPyR6U
— Supereja (@Guaavaaa) December 4, 2021Stay safe yg di lereng semeru dan skitarnya🙏🙏 pic.twitter.com/AXJRwPyR6U
— Supereja (@Guaavaaa) December 4, 2021
ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ (ಮೌಂಟ್ ಸೆಮೇರು) ಲಾವಾರಸ ಸ್ಫೋಟಿಸಿದ್ದು, ಕರಗಿದ ಬೂದಿಯಂತೆ ಜ್ವಾಲಾಮುಖಿಯು ಪೂರ್ವ ಜಾವಾ ಪ್ರಾಂತ್ಯದ ಹತ್ತಿರದ 11 ಹಳ್ಳಿಗಳನ್ನು ಆವರಿಸಿದೆ. ಜನರು ಭಯಭೀತರಾಗಿ ಓಡಿಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಜವಾದ್ ಚಂಡಮಾರುತ : ಮಧ್ಯಾಹ್ನದ ವೇಳೆಗೆ ಒಡಿಶಾದ ಪುರಿಗೆ ತಲುಪುವ ನಿರೀಕ್ಷೆ
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮನೆಗಳೆಲ್ಲ ಲಾವಾರಸದಲ್ಲಿ ಮುಳುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದ್ದು, ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಅವರನ್ನು ಇರಿಸಲಾಗಿದೆ.