ETV Bharat / international

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕ್ರಿಕೆಟ್ ಸೇರಿದಂತೆ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ : ತಾಲಿಬಾನ್ - Taliban says no to women cricket in Afghanistan

ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರನ್ನು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ. ನಾವು ನಮ್ಮ ಧರ್ಮಕ್ಕಾಗಿ ಹೋರಾಡಿದ್ದೇವೆ. ಇದಕ್ಕಾಗಿ ಕೂಡ, ನಾವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧ. ನಾವು ಇಸ್ಲಾಮಿಕ್ ಮೌಲ್ಯಗಳನ್ನು ದಾಟುವುದಿಲ್ಲ. ನಾವು ನಮ್ಮ ಇಸ್ಲಾಮಿಕ್ ನಿಯಮಗಳನ್ನು ಬಿಡುವುದಿಲ್ಲ..

ತಾಲಿಬಾನ್
ತಾಲಿಬಾನ್
author img

By

Published : Sep 8, 2021, 8:31 PM IST

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗಳನ್ನು ಆಡಲು ಅವಕಾಶವಿಲ್ಲ ಎಂದು ತಾಲಿಬಾನ್ ಬುಧವಾರ ಕಟ್ಟಪ್ಪಣೆ ಹೊರಡಿಸಿದೆ. ಈ ಕ್ರಮವು ನವೆಂಬರ್‌ನಲ್ಲಿ ಹೋಬರ್ಟ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಪುರುಷರ ಟೆಸ್ಟ್ ಪಂದ್ಯದ ಬಗ್ಗೆ ಆತಂಕ ಉಂಟು ಮಾಡಿದೆ.

"ನಾನು ಮಹಿಳೆಯರು ಕ್ರಿಕೆಟ್ ಆಡಲು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ, ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವಲ್ಲ. ಕ್ರಿಕೆಟ್​ನಲ್ಲಿ ಅವರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿ ಎದುರಿಸಬಹುದು. ಇಸ್ಲಾಂ ಮಹಿಳೆಯರನ್ನು ನೋಡಲು ಅನುಮತಿಸುವುದಿಲ್ಲ.

ಇದು ಮಾಧ್ಯಮ ಯುಗ. ಫೋಟೋಗಳು ಮತ್ತು ವಿಡಿಯೋಗಳು ಇರುತ್ತವೆ. ನಂತರ ಜನರು ಇದನ್ನು ವೀಕ್ಷಿಸುತ್ತಾರೆ" ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದರು.

"ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರನ್ನು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ" ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದರು.

"ನಾವು ನಮ್ಮ ಧರ್ಮಕ್ಕಾಗಿ ಹೋರಾಡಿದ್ದೇವೆ. ಇದಕ್ಕಾಗಿ ಕೂಡ, ನಾವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧ. ನಾವು ಇಸ್ಲಾಮಿಕ್ ಮೌಲ್ಯಗಳನ್ನು ದಾಟುವುದಿಲ್ಲ. ನಾವು ನಮ್ಮ ಇಸ್ಲಾಮಿಕ್ ನಿಯಮಗಳನ್ನು ಬಿಡುವುದಿಲ್ಲ" ಎಂದರು.

ಶಾಪಿಂಗ್‌ನಂತಹ ಅಗತ್ಯಗಳ ಆಧಾರದ ಮೇಲೆ ಮಹಿಳೆಯರಿಗೆ ಹೊರಗೆ ಹೋಗಲು ಇಸ್ಲಾಂ ಅನುಮತಿ ನೀಡಿದೆ. ಕ್ರೀಡೆಯನ್ನು ಒಂದು ಅಗತ್ಯವೆಂದು ಪರಿಗಣಿಸಲಾಗುವುದಿಲ್ಲ. ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಮಹಿಳೆಯರಿಗೆ ಇಸ್ಲಾಮಿಕ್ ಡ್ರೆಸ್ ಕೋಡ್ ಸಿಗುವುದಿಲ್ಲ. ಇಸ್ಲಾಂ ಅದನ್ನು ಅನುಮತಿಸುವುದಿಲ್ಲ" ಎಂದು ಹೇಳಿದರು.

ಆಸ್ಟ್ರೇಲಿಯಾದ ವಾಣಿಜ್ಯ ಮಂತ್ರಿ ಡಾನ್ ತೆಹಾನ್ ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳನ್ನು ಆಡುವುದನ್ನು ನಿಷೇಧಿಸುವ ತಾಲಿಬಾನ್ ನಿರ್ಧಾರವನ್ನು "ನಂಬಲಾಗದಷ್ಟು, ನಿರಾಶಾದಾಯಕ" ಎಂದು ವಿವರಿಸಿದ್ದಾರೆ.

ಓದಿ: ಪಿಹೆಚ್​​ಡಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ಬೆಲೆ ಇಲ್ಲ : ತಾಲಿಬಾನ್​ ಶಿಕ್ಷಣ ಸಚಿವ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.