ETV Bharat / international

ಸ್ಥಳಾಂತರವಾಗಲು ಕಾಬೂಲ್​ನಲ್ಲಿ ಕಾಯುತ್ತಿದ್ದ ಭಾರತೀಯರನ್ನು ಅಪಹರಿಸಿದ ತಾಲಿಬಾನ್​

ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಳಾಂತರವಾಗಲೆಂದು ಕಾಯುತ್ತಿದ್ದ ಭಾರತೀಯ ಪ್ರಜೆಗಳು ಸೇರಿದಂತೆ ಹಲವರನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.

Taliban kidnap people, including Indians, awaiting evacuation
ಕಾಬೂಲ್​ನಲ್ಲಿ ಕಾಯುತ್ತಿದ್ದ ಭಾರತೀಯರನ್ನು ಅಪಹರಿಸಿದ ತಾಲಿಬಾನ್
author img

By

Published : Aug 21, 2021, 1:37 PM IST

Updated : Aug 21, 2021, 2:12 PM IST

ಕಾಬೂಲ್‌ (ಅಫ್ಘಾನಿಸ್ತಾನ): ತಾಲಿಬಾನ್​ ಉಗ್ರರ ತೆಕ್ಕೆಯಲ್ಲಿರುವ ಅಫ್ಘಾನಿಸ್ತಾನದಿಂದ ಸ್ಥಳಾಂತರವಾಗಲೆಂದು ಕಾಬೂಲ್​ನಲ್ಲಿ ಕಾಯುತ್ತಿದ್ದ ಭಾರತೀಯ ಪ್ರಜೆಗಳು ಸೇರಿದಂತೆ ಹಲವರನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 150 ಮಂದಿಯನ್ನು ತಾಲಿಬಾನ್​ ಉಗ್ರರು ಕಿಡ್ನ್ಯಾಪ್​ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಇವರಲ್ಲಿ ಬಹುತೇಕರು ಭಾರತೀಯರಾಗಿದ್ದಾರೆ.

ಇದನ್ನೂ ಓದಿ: ನಾಗ್ಪುರದಿಂದ ಆಫ್ಘನ್‌ಗೆ ಗಡಿಪಾರು ಆಗಿದ್ದ ಯುವಕ ತಾಲಿಬಾನ್‌ ಸೇರ್ಪಡೆ!

ವಿವಿಧ ವಾಹನಗಳಲ್ಲಿ ಏರ್​ಪೋರ್ಟ್​ವರೆಗೂ ಬಂದ ಜನರಿಗೆ ನಿಲ್ದಾಣದ ಒಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಜನರ ಬಳಿ ಬಂದ ಉಗ್ರರು ಅವರನ್ನು ಥಳಿಸಿ, ಅವರ ವಾಹನಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ವೇಳೆ, ನಾನು ಹಾಗೂ ನನ್ನ ಪತ್ನಿ ವಾಹನದಿಂದ ಕೆಳಗೆ ಜಿಗಿದು ಉಗ್ರರಿಂದ ತಪ್ಪಿಸಿಕೊಂಡಿದ್ದೇವೆ ಎಂದು ವ್ಯಕ್ತಿಯೊಬ್ಬರು ಮಾಧ್ಯಮವೊಂದರ ಬಳಿ ಹೇಳಿಕೊಂಡಿದ್ದಾರೆ.

ಆಫ್ಘನ್ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಸೇಕ್, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದು, ಅವರೊಂದಿಗೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

Last Updated : Aug 21, 2021, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.