ETV Bharat / international

ನಾಗರಿಕರಿಗೆ ಭದ್ರತೆ ಒದಗಿಸುವ ಭರವಸೆ ನೀಡಿದೆ ತಾಲಿಬಾನ್​: ಅಬ್ದುಲ್ಲಾ ಅಬ್ದುಲ್ಲಾ! - ಅಬ್ದುಲ್ಲಾ ಅಬ್ದುಲ್ಲಾ

ತಾಲಿಬಾನ್​ ನೇತೃತ್ವದ ನಿಯೋಗವು ಆಫ್ಘನ್​​ನ ರಾಷ್ಟ್ರೀಯ ಸಮನ್ವಯ ಉನ್ನತ ಮಂಡಳಿ ಅಧ್ಯಕ್ಷ ಅಬ್ದುಲ್ಲಾ ಅಬ್ದುಲ್ಲಾರನ್ನು ಭೇಟಿ ಮಾಡಿದ್ದು, ಜನರ ಸುರಕ್ಷತೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.

Taliban assures security for citizens of Kabul

author img

By

Published : Aug 19, 2021, 8:13 PM IST

ಕಾಬೂಲ್ (ಅಫ್ಘಾನಿಸ್ತಾನ): ಖಲೀಲ್ ಅಲ್ - ರೆಹಮಾನ್ ಹಕ್ಕಾನಿ ನೇತೃತ್ವದ ತಾಲಿಬಾನ್ ನಿಯೋಗವು ಅಫ್ಘಾನಿಸ್ತಾನದ ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿಯ ಅಧ್ಯಕ್ಷ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ, ಜನರ ಸುರಕ್ಷತೆಗಾಗಿ ಕೆಲಸ ಮಾಡುವುದಾಗಿ ತಾಲಿಬಾನ್​​ ಭರವಸೆ ನೀಡಿದೆ

ಈ ಬಗ್ಗೆ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ತಮ್ಮ ಮನೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಹಮೀದ್ ಕರ್ಜೈ, ರಾಷ್ಟ್ರೀಯ ಸಭೆಯ ಕೆಳಮನೆಯ ಸ್ಪೀಕರ್ ಫಜಲ್ ಹದಿ ಮುಸ್ಲಿಮಿಯಾರ್ ಮತ್ತು ಹಲವಾರು ಹಿರಿಯರು ಹಾಜರಿದ್ದರು ಎಂದು ಉಲ್ಲೇಖಿಸಿದ್ದಾರೆ.

  • HE Dr Abdullah Abdullah, Chairman of HCNR @SapedarPalace, yesterday evening at his residence met Mr Khalil Al-Rahman Haqqani & his accompanying delegation of Taliban in Kabul.
    HE @KarzaiH, Mr Fazal Hadi Muslimyar & several other elders & personalties attend the meeting. 1/5 pic.twitter.com/3emd3QGM2j

    — Dr. Abdullah Abdullah (@DrabdullahCE) August 19, 2021 " class="align-text-top noRightClick twitterSection" data=" ">

ಸಭೆಯಲ್ಲಿ, ನ್ಯಾಯದ ಆಧಾರದ ಮೇಲೆ ಸ್ವತಂತ್ರ ಮತ್ತು ಏಕೀಕೃತ ಅಫ್ಘಾನಿಸ್ತಾನವನ್ನು ಬೆಂಬಲಿಸುವುದಾಗಿ ಅಬ್ದುಲ್ಲಾ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಸಾಮಾಜಿಕ ನ್ಯಾಯದ ಅನುಪಸ್ಥಿತಿಯಲ್ಲಿ, ಭದ್ರತೆಯನ್ನು ಸಾಬೀತುಪಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಅಸಾಧ್ಯವೆಂದು ಇತಿಹಾಸವು ತೋರಿಸುತ್ತದೆ ಎಂದು ಅವರು ತಾಲಿಬಾನ್​ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶ್ರೀ ಹಕ್ಕಾನಿ, ಕಾಬೂಲ್​ ನಾಗರಿಕರಿಗೆ ಭದ್ರತೆ ಒದಗಿಸುವ ಭರವಸೆ ನೀಡಿದ್ದು, ಅದಕ್ಕಾಗಿ ರಾಜಕೀಯ ನಾಯಕರ ಬೆಂಬಲ ಕೋರಿದ್ದಾರೆ ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ತಾಲಿಬಾನ್​ಗೆ ಹೆದರಿ ದೇಶ ತೊರೆಯುತ್ತಿರುವ ಜನತೆ..ಏರ್ಪೋರ್ಟ್​ ಬಳಿ ಜಮಾವಣೆ.. ಗುಂಡಿನ ಮೊರೆತ

ಆಗಸ್ಟ್ 15 ರಂದು ಕಾಬೂಲ್​ ಅನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, ಸ್ಥಳೀಯರು ಜೀವಭಯದಿಂದ ದೇಶ ತೊರೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.