ETV Bharat / international

ಬಾಗ್ದಾದ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಏಳು ಮಂದಿ ಬಲಿ

ಬಾಗ್ದಾದ್​ನ ವಾಣಿಜ್ಯ ಕೇಂದ್ರದ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಲಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

Seven killed as suicide bombers hit central Baghdad
ಬಾಗ್ದಾದ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ
author img

By

Published : Jan 21, 2021, 2:59 PM IST

ಬಾಗ್ದಾದ್: ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿ ಇಂದು ನಡೆದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ಬಾಗ್ದಾದ್​ನ ವಾಣಿಜ್ಯ ಕೇಂದ್ರದಲ್ಲಿ ಎರಡು ಬಾರಿ ಸ್ಫೋಟವಾಗಿದ್ದು, ಇದು ಸೂಸೈಡ್​ ಬಾಂಬಿಂಗ್​ ಎಂದು ಸರ್ಕಾರಿ ಟಿವಿ ಮಾಧ್ಯಮ ವರದಿ ಮಾಡಿದೆ. ಇರಾಕ್​ನಲ್ಲಿ 2021ರ ಮೊದಲ ಉಗ್ರರ ದಾಳಿ ಇದಾಗಿದೆ.

ಇದನ್ನೂ ಓದಿ: ಶ್ರೀವಿಜಯ ವಿಮಾನ ದುರಂತ: ವಾಯ್ಸ್​ ರೆಕಾರ್ಡರ್​​ಗೆ ಶೋಧ, ಸಂತ್ರಸ್ತರಿಗೆ ಪರಿಹಾರ ಭರವಸೆ

ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.