ಕೊಲಂಬೊ : ತೆಂಗಿನಕಾಯಿ ಕೊರತೆಯ ಬಗ್ಗೆ ಜನರಿಗೆ ಸಂದೇಶ ರವಾನಿಸಲು ಶ್ರೀಲಂಕಾದ ತೆಂಗಿನಕಾಯಿ ರಾಜ್ಯ ಸಚಿವ ಅರುಂಡಿಕಾ ಫರ್ನಾಂಡೊ ತೆಂಗಿನ ಮರ ಹತ್ತಿರುವ ಘಟನೆ ನಡೆದಿದೆ.
ದ್ವೀಪರಾಷ್ಟ್ರದಲ್ಲಿನ ತೆಂಗಿನ ಕಾಯಿ ಸಮಸ್ಯೆ ಬಗ್ಗೆ ಜನತೆಗೆ ಸಂದೇಶ ನೀಡಲು ಕಲ್ಪವೃಕ್ಷ ಮರವೇರಿದ ಸಚಿವ, 'ಸ್ಥಳೀಯ ಕೈಗಾರಿಕೆಗಳು ವ್ಯಾಪಕ ಬೇಡಿಕೆ ಮತ್ತು ದೇಶೀಯ ಯಥೇಚ್ಛ ಬಳಕೆಯಿಂದಾಗಿ ಶ್ರೀಲಂಕ, 700 ಮಿಲಿಯನ್ ತೆಂಗಿನಕಾಯಿ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು.
ನ್ಯೂಸ್ ಫಸ್ಟ್ ಫರ್ನಾಂಡೊ ಅವರನ್ನು ಉಲ್ಲೇಖಿಸಿ, ಲಭ್ಯವಿರುವ ಪ್ರತಿಯೊಂದು ಜಮೀನನ್ನು ತೆಂಗಿನಕಾಯಿ ಕೃಷಿಗೆ ಬಳಸಿಕೊಳ್ಳುತ್ತೇವೆ. ದೇಶಕ್ಕೆ ವಿದೇಶಿ ವಿನಿಮಯ ಉಂಟು ಮಾಡುವ ಉದ್ಯಮ ವೃದ್ಧಿಸುವ ಆಸೆ ಹೊಂದಿದ್ದೇವೆ ಎಂದರು.
ತೆಂಗಿನಕಾಯಿ ಬೆಲೆ ಸಮಸ್ಯೆಗೆ ಪರಿಹಾರ ನೀಡಿದ, ದೇಶದಲ್ಲಿ ತೆಂಗಿನಕಾಯಿ ಕೊರತೆಯ ಮಧ್ಯೆ ಬೆಲೆಗಳನ್ನು ಕಡಿಮೆ ಮಾಡುವ ಗುರಿ ಸರ್ಕಾರ ಹೊಂದಿದೆ ಎಂಬ ಹೇಳಿಕೆ ನೀಡಿದ್ದಾರೆ.