ETV Bharat / international

ರೂಪಾಂತರಿ ವೈರಸ್ ಮೂಲ ವಿಚಾರ: ಕೇಜ್ರಿವಾಲ್ ಹೇಳಿಕೆ ತಳ್ಳಿ ಹಾಕಿದ ಸಿಂಗಾಪುರ - Delhi CM tweet

ಮಾರಣಾಂತಿಕ ರೂಪಾಂತರಿ ಕೋವಿಡ್ ವೈರಸ್ ಸಿಂಗಾಪುರದಲ್ಲಿ ಪತ್ತೆಯಾಗಿದೆ ಎಂಬ ದೆಹಲಿ ಸಿಎಂ ಅರವಿಂದ್ ಕ್ರೇಜ್ರಿವಾಲ್ ಹೇಳಿಕೆಯನ್ನು ಸಿಂಗಾಪುರ ಸರ್ಕಾರ ತಳ್ಳಿ ಹಾಕಿದೆ.

New Covid variant in Singapore
ಕೇಜ್ರಿವಾಲ್ ಹೇಳಿಕೆ ತಳ್ಳಿ ಹಾಕಿದ ಸಿಂಗಾಪು
author img

By

Published : May 19, 2021, 8:42 AM IST

ಸಿಂಗಾಪುರ: ಅತ್ಯಂತ ವಿನಾಶಕಾರಿಯಾಗಿರುವ ಹೊಸ ಕೋವಿಡ್ ರೂಪಾಂತರಿ ವೈರಸ್ ಸಿಂಗಾಪುರದಲ್ಲಿ ಪತ್ತೆಯಾಗಿದೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ಉಲ್ಲೇಖಿಸಿದ್ದ ಮಾಧ್ಯಮ ವರದಿಗಳನ್ನು ಸಿಂಗಾಪುರ ಸರ್ಕಾರ ಅಲ್ಲಗಳೆದಿದೆ.

ಸೋಂಕು ಮೂರನೇ ಅಲೆ ಮೂಲಕ ಹೊಸ ಕೋವಿಡ್ ರೂಪಾಂತರಿ ವೈರಸ್ ಭಾರತಕ್ಕೆ ಪ್ರವೇಶಿಸಲಿದೆ. ಸಿಂಗಾಪುರದಲ್ಲಿ ಪತ್ತೆಯಾಗಿರುವ ಈ ರೂಪಾಂತರಿ ತಳಿ, ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಇದು ಮೂರನೇ ಅಲೆ ಸ್ವರೂಪದಲ್ಲಿ ದೆಹಲಿಗೆ ಪ್ರವೇಶಿಸುವ ಸಂಭವವಿದೆ. ಹಾಗಾಗಿ, ಸಿಂಗಾಪುರದೊಂದಿಗಿನ ಎಲ್ಲಾ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಮಕ್ಕಳಿಗೆ ಅದ್ಯತೆಯ ಮೇಲೆ ಲಸಿಕೆ ವಿತರಣೆ ಮಾಡಬೇಕು ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್​ನಲ್ಲಿ ಕೇಜ್ರಿವಾಲ್ ವಿವರಿಸಿದ್ದರು.

  • सिंगापुर में आया कोरोना का नया रूप बच्चों के लिए बेहद ख़तरनाक बताया जा रहा है, भारत में ये तीसरी लहर के रूप में आ सकता है।

    केंद्र सरकार से मेरी अपील:
    1. सिंगापुर के साथ हवाई सेवाएं तत्काल प्रभाव से रद्द हों
    2. बच्चों के लिए भी वैक्सीन के विकल्पों पर प्राथमिकता के आधार पर काम हो

    — Arvind Kejriwal (@ArvindKejriwal) May 18, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಹವಾನ ಸಿಂಡ್ರೋಮ್​: ತನಿಖೆಗೆ ಮುಂದಾದ ಬೈಡನ್​ ಸರ್ಕಾರ

ಇದಕ್ಕೆ ಪ್ರತಿಕ್ರಿಯಿಸಿದ ಸಿಂಗಾಪುರದ ಭಾರತದಲ್ಲಿರುವ ರಾಯಭಾರಿ, ಅಂತಹ ಯಾವುದೇ ವೈರಸ್ ನಮ್ಮಲ್ಲಿ ಪತ್ತೆಯಾಗಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ. ಇತ್ತೀಚೆಗೆ ಎಲ್ಲಾ ಕಡೆ ಹರಡಿರುವ ವೈರಸ್ ಅಂದ್ರೆ, ಅದು ಬಿ.1.617.2 ಆಗಿದೆ. ಈ ವೈರಸ್ ಭಾರತದಲ್ಲಿ ಪತ್ತೆಯಾಗಿದ್ದು, ಸಿಂಗಾಪುರದ ಕೆಲವೊಂದು ಭಾಗಗಳಲ್ಲಿ ಕಂಡುಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • There is no truth in the assertion that there is a new COVID strain in Singapore. Phylogenetic testing has shown that the B.1.617.2 variant is the prevalent strain in many of the COVID cases, including in children, in recent weeks in Singapore.https://t.co/uz0mNPNxlE https://t.co/Vyj7gyyzvJ

    — Singapore in India (@SGinIndia) May 18, 2021 " class="align-text-top noRightClick twitterSection" data=" ">

ಕೇಜ್ರಿವಾಲ್ ಮನವಿಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಸಿಂಗಾಪುರದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಂದೇ ಭಾರತ್ ಅಭಿಯಾನದಡಿ ಕೆಲವು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದೆ. ವಿಮಾನಯಾನದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.