ETV Bharat / international

172 ಮತ ತೋರಿಸಿ ಇಲ್ಲವೇ ಮನೆಗೆ ನಡೆಯಿರಿ: ಇಮ್ರಾನ್​ ಖಾನ್​ಗೆ ಜರ್ದಾರಿ ಸವಾಲು​

author img

By

Published : Mar 19, 2022, 8:04 PM IST

ಇಮ್ರಾನ್​ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾ.28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಇಮ್ರಾನ್​ ಖಾನ್​ಗೆ ಸವಾಲು ಹಾಕಿದ್ದಾರೆ.

Show 172 votes or 'go home', Zardari challenges Pakistan PM ahead of no-confidence vote
172 ಮತ ತೋರಿಸಿ ಇಲ್ಲವೇ ಮನೆಗೆ ನಡೆಯಿರಿ: ಇಮ್ರಾನ್​ಖಾನ್​ಗೆ ಜರ್ದಾರಿ ಸವಾಲ್​

ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ರಾಜಕೀಯದಲ್ಲಿ ಏರಿಳಿತಗಳು ತೀವ್ರವಾಗಿವೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾರ್ಚ್​​ 28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆಯಿದ್ದು, ಪ್ರತಿಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಇಮ್ರಾನ್​ ಖಾನ್​ಗೆ ಸವಾಲು ಹಾಕಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತವಿದೆ ಎಂದು ಸಾಬೀತುಪಡಿಸಲಿ ಇಲ್ಲದೇ ಇದ್ದಲ್ಲಿ ಮನೆಗೆ ಹೋಗಲಿ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸವಾಲು ಹಾಕಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್​ನ ಪಾಕಿಸ್ತಾನ ವರದಿಗಾರರು ಮಾಹಿತಿ ನೀಡಿದ್ದಾರೆ.

'ಇಂಥಹ ಸಮಯದಲ್ಲಿ ನೀವು ಬಾಲ್ ಟ್ಯಾಂಪರಿಂಗ್ ಮಾಡಬೇಡಿ, 172 ಮತಗಳನ್ನು ತೋರಿಸಿ ಇಲ್ಲವೆ ಮನೆಗೆ ಹಿಂತಿರುಗಿ' ಎಂದು ಜರ್ದಾರಿ ಹೇಳಿದ್ದು, ನಮ್ಮ ಮೇಲೆ ನಡೆಸಿದ ದಾಳಿಯಿಂದಾಗಿ ನಾವು ಹೆದರುವುದಿಲ್ಲ ಎಂದು ಜರ್ದಾರಿ ಗುಡುಗಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿ, ನ್ಯಾಯ ಒದಗಿಸುವ ಸಮಯ ಬಂದಿದೆ: ಝೆಲೆನ್ಸ್ಕಿ

ಇಮ್ರಾನ್​ ಖಾನ್ ಇದಕ್ಕೂ ಮೊದಲು ಪೊಲೀಸರನ್ನು ಬಳಸಿಕೊಂಡು ಪ್ರತಿಪಕ್ಷಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು ಎನ್ನಲಾಗ್ತಿದೆ. ಇದಷ್ಟೇ ಅಲ್ಲದೇ ತಮ್ಮ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರು ಇಸ್ಲಾಮಾಬಾದ್‌ನ ಸಿಂಧ್ ಹೌಸ್ ಮೇಲೆ ದಾಳಿ ನಡೆಸಿ ಪ್ರತಿಪಕ್ಷದ ನಾಯಕರನ್ನು ಭಯಭೀತಗೊಳಿಸುವ ಪ್ರಯತ್ನ ಮಾಡಿದರು ಎನ್ನಲಾಗ್ತಿದೆ.

ಈ ಹಿನ್ನೆಲೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಇಮ್ರಾನ್​ ಖಾನ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ, ಅದು ಪಾಕ್​ನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಅವಿಶ್ವಾಸ ನಿರ್ಣಯ ಎಂದು ಗುರುತಿಸಲ್ಪಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.