ಬೀಜಿಂಗ್: ಬೆಳಗ್ಗೆ 9ರಿಂದ ರಾತ್ರಿ 9ಗಂಟೆವರೆಗೆ, ವಾರದ 6 ದಿನಗಳು ಕೆಲಸ(996)ಎಂಬ ನಿಯಮ ರೂಪಿಸಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ, ಇದೀಗ ವಿಚಿತ್ರವಾದ ಸೂತ್ರ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಜೀವನಶೈಲಿ ವೃದ್ಧಿಗಾಗಿ “669” ಸೂತ್ರ ನೀಡಿರುವ ಜಾಕ್ ಮಾ, 6 ದಿನ 6 ಸಲ ಸೆಕ್ಸ್ ಮಾಡಬೇಕು. ಇದು ನಿಮಗೆ ಪ್ರಧಾನ ಅವಧಿ ಎಂದೂ ಸಲಹೆ ಕೊಟ್ಟಿದ್ದಾರೆ.
ಅಲಿಬಾಬಾ ಕಂಪನಿಯ ಸಿಬ್ಬಂದಿಯ ಸಾಮೂಹಿಕ ವಿವಾಹದ ವೇಳೆ ಕೆಲಸಗಾರರಿಗೆ ಜಾಕ್ ಮಾ ಈ ಸೂತ್ರ ನೀಡಿದರು ಎಂದು ಡೈಲಿ ಮೈಲ್ನಲ್ಲಿ ವರದಿಯಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಹಂಝಾವುನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 'ಅಲಿ ಡೇ' ಹೆಸರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದೆ.
ಕೆಲಸದಲ್ಲಿ ನಾವು “996” ಈ ಸೂತ್ರದಿಂದ ಸ್ಫೂರ್ತಿ ಪಡೆಯಬೇಕು. ಹಾಗೆಯೇ, ಜೀವನದಲ್ಲಿ “669” ಈ ಸೂತ್ರದಿಂದ ಫಾಲೋ ಮಾಡಬೇಕು ಎಂದು ಮಾ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿರುವ ಈ ಎರಡೂ ಸೂತ್ರವನ್ನು ಬಹುತೇಕ ನೆಟ್ಟಿಗರು ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.