ಒಸಾಕ( ಜಪಾನ್): ಜಿ- 20 ಶೃಂಗದಲ್ಲಿ ರಷ್ಯಾ, ಚೀನಾ ಹಾಗೂ ಭಾರತದ ನಾಯಕರು ಪ್ರತ್ಯೇಕ ಸಭೆ ನಡೆಸಿದರು. ವಿಶ್ವದಲ್ಲಿನ ಏಕಸ್ವಾಮ್ಯತೆ ಕೊನೆಗಾಣಿಸಲು ಭಾರತದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಿರ್ಧಾರಕ್ಕೆ ಬಂದರು.
ಶುಕ್ರವಾರ ನಡೆದ ಈ ಸಭೆ ಶೃಂಗಸಭೆಯ ಪ್ರಮುಖವಾಗಿ ಗಮನ ಸೆಳೆಯಿತು. ಇನ್ನು ಮೂರೂ ರಾಷ್ಟ್ರಗಳ ನಡುವಣ ಸಂಬಂಧ ಮತ್ತಷ್ಟು ಸುಧಾರಿಸುವ ಹಾಗೂ ವೃದ್ಧಿಸುವ ಸಂಬಂಧ ಮಹತ್ವದ ಮಾತುಕತೆಗಳು ನಡೆದವು.
ಮೂರು ರಾಷ್ಟ್ರಗಳ ನಾಯಕರ ಮಾತುಕತೆ ವೇಳೆ, ರಷ್ಯಾ ಅಧ್ಯಕ್ಷ ಪುಟಿನ್, ಅಂತಾರಾಷ್ಟ್ರೀಯ ಕಾನೂನು, ಆಯಾಯ ರಾಷ್ಟ್ರಗಳ ಸಾರ್ವಭೌಮ್ಯತೆಗೆ ಗೌರವ ಹಾಗೂ ಇತರ ರಾಷ್ಟ್ರಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರುವ ಬಗ್ಗೆ ಪ್ರಸ್ತಾಪಿಸಿದರು.
ಅಷ್ಟೇ ಅಲ್ಲ ಮಾನವ ಕಳ್ಳ ಸಾಗಣೆ, ಭಯೋತ್ಪಾದನೆ ಮಟ್ಟಹಾಕುವುದು ಹಾಗೂ ಕಾನೂನು ಬಾಹಿರ ನಿರ್ಬಂಧಗಳನ್ನ ವಿರೋಧಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಒಮ್ಮತಕ್ಕೂ ಬರಲಾಯಿತು. ಇದೇ ವೇಳೆ, ಅಮೆರಿಕದ ಹಸ್ತಕ್ಷೇಪ, ಕಾನೂನು ಬಾಹೀರ ನಿಷೇಧಗಳನ್ನ ಮೂರು ರಾಷ್ಟ್ರಗಳು ಒಕ್ಕೋರಿಲಿನಿಂದ ಖಂಡಿಸಿದರು.