ಇಸ್ಲಾಮಾಬಾದ್: ಅಣು ಬಾಂಬ್ ಬಳಕೆ ವಿಚಾರದಲ್ಲಿ ಭಾರತ ಪಾಲಿಸಿಕೊಂಡು ಬರುತ್ತಿರುವ ನೋ ಫಸ್ಟ್ ಯೂಸ್( ಮೊದಲು ಬಳಕೆ ಮಾಡಲ್ಲ) ಎನ್ನುವ ನೀತಿ ಬದಲಾಗಬಹುದು ಎನ್ನುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ.
ಭಾರತದ ರಕ್ಷಣಾ ಸಚಿವರ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ಆ ದೇಶದ ಬೇಜವಾಬ್ದಾರಿತನಕ್ಕೆ ಈ ಹೇಳಿಕೆ ಕೈಗನ್ನಡಿ ಎಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಏಷ್ಯಾದಲ್ಲಿ ಅಣು ಬಾಂಬ್ ಬಳಕೆ ವಿಚಾರದಲ್ಲಿ ಪಾಕಿಸ್ತಾನ ಸಂಯಮ ಕಾಯ್ದುಕೊಂಡು ಬರುತ್ತಿದ್ದು, ಇದನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಪಾಕಿಸ್ತಾನ ತನ್ನ ಪ್ರಕಟಣೆಯಲ್ಲಿ ಹೇಳಿದೆ.