ETV Bharat / international

3 ವರ್ಷದ ಬಳಿಕ ಸೌದಿ ಜೈಲಿನಿಂದ ಹೊರಬಂದ ಮಹಿಳಾ ಹಕ್ಕು ಹೋರಾಟಗಾರ್ತಿ - ಲೌಜೈನ್ ಅಲ್-ಹಾಥ್ಲೌಲ್

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸುವುದನ್ನು ನಿಷೇಧಿಸಲು ಮುಂದಾಗಿದ್ದ ಸರ್ಕಾರದ ನಿಲುವನ್ನು ಪ್ರಶ್ನಸಿದ್ದ ಲೌಜೈನ್ ಅವರನ್ನು 2018ರಲ್ಲಿ ಬಂಧಿಸಲಾಯಿತು ಮತ್ತು ಕಳೆದ ಡಿಸೆಂಬರ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಸುಮಾರು 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

Loujain al-Hathloul
ಲೌಜೈನ್ ಅಲ್-ಹಾಥ್ಲೌಲ್
author img

By

Published : Feb 11, 2021, 5:07 PM IST

ದುಬೈ: ಸೌದಿ ಅರೇಬಿಯಾದ ಪ್ರಮುಖ ರಾಜಕೀಯ ಕಾರ್ಯಕರ್ತೆಯಾಗಿದ್ದ ಲೌಜೈನ್ ಅಲ್ - ಹಾಥ್ಲೌಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ ಈಕೆಯ ಬಂಧನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊನೆಗೂ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಸ್ಥಿರತೆ, ವಿದೇಶಿ ಅಜೆಂಡಾದಂತಹ ಆರೋಪ ಹೊರಿಸಿ ಸರಿ ಸುಮಾರು 3 ವರ್ಷಗಳ ಕಾಲ ಬಂಧನದಲ್ಲಿಡಲಾಗಿತ್ತು. ಆದರೆ, ಅವರ ಬಂಧನ ಕೇವಲ ರಾಜಕೀಯ ಪ್ರೇರಿತವಾಗಿತ್ತು ಎಂಬ ಮಾತುಗಳು ಹರಿದಾಡುತ್ತಿದ್ದವು.

ಆದರೆ, ಆಕೆಯ ಬಿಡುಗಡೆಯ ಕುರಿತು ಈವರೆಗೆ ಸೌದಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಕೆಯ ಶಿಕ್ಷೆಯ ಅವಧಿಯಲ್ಲಿ 2 ವರ್ಷ 10 ತಿಂಗಳಷ್ಟು ಕಡಿತ ಮಾಡಿ ಆದೇಶ ಹೊರಡಿಸಿದ್ದರಿಂದ ಲೌಜೈನ್​ ಬಿಡುಗೆಡೆಯನ್ನು ನಿರೀಕ್ಷಿಸಲಾಗಿತ್ತು.

ಇದೊಂದು ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವಾಗಿದ್ದರಿಂದ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಸಹ ಲೌಜೈನ್​​ ಬಿಡುಗಡೆ ಕುರಿತು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಸೌದಿ ಸರ್ಕಾರ ಮಹಿಳಾ ಹಕ್ಕು ಕಾರ್ಯಕರ್ತೆ ಲೌಜೈನ್ ಬಿಡುಗಡೆ ಮಾಡಿರುವ ಸುದ್ದಿ ತಿಳಿಯಿತು. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: 2020ರ ಚುನಾವಣಾ ಫಲಿತಾಂಶ ರದ್ದುಗೊಳಿಸುವ ಟ್ರಂಪ್ ಪ್ರಯತ್ನ: ಕ್ರಿಮಿನಲ್ ತನಿಖೆ ಪ್ರಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.