ಮಾಸ್ಕೋ(ರಷ್ಯಾ): ಪೆರುವಿನ ಹೊಸ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಮತದಾನವನ್ನು ಪೆರುವಿನ ಕಾಂಗ್ರೆಸ್ ಇಂದು ಮಧ್ಯಾಹ್ನದವರೆಗೆ ತಡೆಹಿಡಿದಿದೆ.
"ವರ್ಚುವಲ್ ಪ್ಲೀನರಿ ಅಧಿವೇಶನವನ್ನು ಮಧ್ಯಾಹ್ನದವರೆಗೆ (14:00 [22:00 GMT]) ಸ್ಥಗಿತಗೊಳಿಸಲಾಗಿದೆ ಹಾಗೂ ವಕ್ತಾರರ ಸಮಾವೇಶವು 10 [18:00 GMT] ಕ್ಕೆ ನಡೆಯಲಿದೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇನ್ನು ದೇಶದ ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಬಳಿಕ ಭಾನುವಾರ ಪೆರುವಿನ ಹಂಗಾಮಿ ಅಧ್ಯಕ್ಷ ಮ್ಯಾನುಯೆಲ್ ಮೆರಿನೊ ತಮ್ಮ ರಾಜೀನಾಮೆ ಘೋಷಿಸಿದ್ದರು.
ಅದೇ ದಿನ ಸಂಜೆ ಕಾಂಗ್ರೆಸ್ ಹೊಸ ಮಧ್ಯಂತರ ಅಧ್ಯಕ್ಷರನ್ನು ಹಾಗೂ ಹೊಸ ಅಧ್ಯಕ್ಷೀಯ ಆಡಳಿತವನ್ನು ನೇಮಿಸಲು ಪ್ರಯತ್ನಿಸಿತ್ತು. ಕಾಂಗ್ರೆಸ್ಸಿಗ ರೊಸಿಯೊ ಸಿಲ್ವಾ ಸ್ಯಾಂಟಿಸ್ಟೆಬನ್ ಹಂಗಾಮಿ ಅಧ್ಯಕ್ಷ ಅಭ್ಯರ್ಥಿಯಾಗಿದ್ದರೆ, ಫ್ರಾನ್ಸಿಸ್ಕೊ ಸಾಗಸ್ತಿ ಹೊಚೌಸ್ಲರ್ ಅವರನ್ನು ಮೊದಲ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಹೊಸ ಅಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್ ಈ ಹಿಂದೆ ಮಾಡಿದ ಪ್ರಯತ್ನದಲ್ಲಿ 42 ಮತಗಳು ಪರವಾಗಿದ್ದರೆ, 52 ಮತಗಳ ವಿರುದ್ಧ ಬಿದಿದ್ದವು.