ಕಾಬೂಲ್ (ಅಫ್ಘಾನಿಸ್ತಾನ್) : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಏರ್ಪೋರ್ಟ್ ಬಳಿ ನಿನ್ನೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿ ಹಲವರು ಸಾವನ್ನಪ್ಪಿದ್ದರು. ಆದರೆ, ಬಾಂಬ್ ಸ್ಫೋಟ ಸಂಭವಿಸಿದ್ದರೂ ಸಹ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದಾರೆ.
ಅಫ್ಘನ್ ಪ್ರಜೆಗಳು ದೇಶ ತೊರೆಯಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ದೇಶ ತೊರೆಯುತ್ತಿದ್ದ ಅಫ್ಘನ್ ಪ್ರಜೆಗಳ ಮೇಲೆ ನಿನ್ನೆ ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿದ್ದರೂ ಕೂಡ ಸಾವಿರಾರು ಮಂದಿ ಜಮಾಯಿಸಿದ್ದಾರೆ.
ನಿನ್ನೆಯ ದಾಳಿಯ ಹೊಣೆಯನ್ನ ಐಸಿಸ್ ಉಗ್ರ ಸಂಘಟನೆ ಹೊತ್ತಿದೆ. ಈಗಲೂ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿನ್ನೆಯ ದಾಳಿಯಲ್ಲಿ ಅಮೆರಿಕ ಸೈನಿಕರು ಸೇರಿ ಒಟ್ಟು 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ನೂರಾರು ಮಂದಿ ಗಾಯಗೊಂಡಿದ್ದರು.