ಲಾಹೋರ್(ಪಾಕಿಸ್ತಾನ): ಮದುವೆ ಸಂಭ್ರಮದಲ್ಲಿ ನವ ಜೋಡಿ ಕಾರು, ಕುದುರೆ ಸೇರಿ ಐಷಾರಾಮಿ ವಾಹನಗಳಲ್ಲಿ ಮದುವೆ ಮಂಟಪಕ್ಕೆ ಬಂದು ಜನರ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಅವುಗಳ ವಿಡಿಯೋ ಕೂಡ ವೈರಲ್ ಆಗಿವೆ. ಆದರೆ, ಪಾಕಿಸ್ತಾನದಲ್ಲಿ ನಡೆದಿರುವ ಘಟನೆವೊಂದು ವಿಭಿನ್ನವಾಗಿದೆ.
-
#VideoViral Adventures wedding in #Hunza Valley #Pakistan pic.twitter.com/ruhMmqwPYI
— Ghulam Abbas Shah (@ghulamabbasshah) October 1, 2021 " class="align-text-top noRightClick twitterSection" data="
">#VideoViral Adventures wedding in #Hunza Valley #Pakistan pic.twitter.com/ruhMmqwPYI
— Ghulam Abbas Shah (@ghulamabbasshah) October 1, 2021#VideoViral Adventures wedding in #Hunza Valley #Pakistan pic.twitter.com/ruhMmqwPYI
— Ghulam Abbas Shah (@ghulamabbasshah) October 1, 2021
ಪಾಕಿಸ್ತಾನದ ಹುಂಜಾ ಕಣಿವೆ(Hunza Valley) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಧು-ವರರು ಅದ್ದೂರಿ ವಾಹನ ಬಿಟ್ಟು ಜೆಸಿಬಿಯಲ್ಲಿ ಬಂದಿದ್ದಾರೆ. ಜೆಸಿಬಿಗೆ ಹೂವು-ಲೈಟ್ನಿಂದ ಶೃಂಗಾರ ಮಾಡಲಾಗಿದೆ. ಅದರ ಮುಂದಿನ ಭಾಗದಲ್ಲಿ ನವಜೋಡಿ ನಿಂತುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾರೆ. ಈ ವೇಳೆ ಅನೇಕರು ಸಂಭ್ರಮಿಸಿದ್ದಾರೆ.
ಇದನ್ನೂ ಓದಿರಿ: ದೇಶದಲ್ಲಿ 90 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ : ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು
ಪಾಕಿಸ್ತಾನದ ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಮಾರು 40 ಸೆಕೆಂಡ್ಗಳ ಈ ವಿಡಿಯೋವನ್ನ ಈವರೆಗೆ ಸಾವಿರಾರು ಜನರು ವೀಕ್ಷಣೆ ಮಾಡಿದ್ದು, ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ.